ನವದೆಹಲಿ: ಜೈಪುರ ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಇಂಡಿಗೊ ವಿಮಾನ ತಂಗಲು ಸಿದ್ಧತೆ ನಡೆಸುತ್ತಿದ್ದಾಗ ಏರೊಬ್ರಿಡ್ಜ್ ಗೆ ಢಿಕ್ಕಿ ಹೊಡೆದು ಸಂಭವಿಸಲಿದ್ದ ಭಾರೀ ಅಪಘಾತ ತಪ್ಪಿಹೋದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಇಂಡಿಗೊ ವಿಮಾನ ಹೇಳಿಕೆಯಲ್ಲಿ ತಿಳಿಸಿದೆ.
ಇಂಡಿಗೊ ವಿಮಾನ(6ಇ-962, ದೆಹಲಿ-ಜೈಪುರ್) ಇಂದು ಬೆಳಗ್ಗೆ ಜೈಪುರ ವಿಮಾನ ನಿಲ್ದಾಣದಲ್ಲಿ ತಂಗಲು ಇಳಿಯುತ್ತಿದ್ದಾಗ ಏರೊಬ್ರಿಡ್ಜ್ ಸಂಪರ್ಕಕ್ಕೆ ಸಿಲುಕಿತ್ತು. ವಿಮಾನ ನಿಲ್ದಾಣದಲ್ಲಿದ್ದ ನಮ್ಮ ತಂಡ ತಕ್ಷಣವೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿತು. ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದೆ.
ಇಂಡಿಗೊ ಸ್ವಯಂ ಪ್ರೇರಿತವಾಗಿ ವಿಷಯವನ್ನು ನಿಯಂತ್ರಕರಿಗೆ ತಿಳಿಸಿದೆ. ಭದ್ರತಾ ವಿಭಾಗ ಈ ಬಗ್ಗೆ ತನಿಖೆ ನಡೆಸುತ್ತಿದೆ.