ದೇಶ

ಬ್ರಿಟಿಷ್ ಗೆಳೆಯನೊಂದಿಗೆ ಐರನ್ ಲೇಡಿ ಇರೋಮ್‌ ಶರ್ಮಿಳಾ ಮದುವೆ

Lingaraj Badiger
ಇಂಫಾಲ್: ಇತ್ತೀಚಿಗಷ್ಟೇ ಮುಕ್ತಾಯಗೊಂಡ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ತೌಬಾಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಐರನ್ ಲೇಡಿ ಇರೋಮ್‌ ಶರ್ಮಿಳಾ ಅವರು ಈಗ ತಮ್ಮ ಬ್ರಿಟಿಷ್ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ.
ಇರೋಮ್‌ ಶರ್ಮಿಳಾ ಅವರು ತಮ್ಮ ಬಹುಕಾಲದ ಗೆಳೆಯ ಡೆಸ್ಮಂಡ್ ಕೌಟಿನ್ಹೊ ಅವರೊಂದಿಗೆ ಜುಲೈ ತಿಂಗಳಲ್ಲಿ ಮದುವೆಯಾಗುವ ಸಾಧ್ಯತೆ ಇದೆ.
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಇರೋಮ್ ಶರ್ಮಿಳಾ, ನಾವು ಇನ್ನೂ ಮದುವೆ ದಿನಾಂಕ ನಿಗದಿ ಮಾಡಿಲ್ಲ. ಆದರೆ ಜುಲೈ ಅಂತ್ಯಕ್ಕೆ ತಮಿಳುನಾಡಿನಲ್ಲಿ ಮದುವೆಯಾಗುವ ಚಿಂತನೆ ನಡೆಸಿದ್ದೇವೆ ಎಂದಿದ್ದಾರೆ.
ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ 16 ವರ್ಷಗಳಿಂದ ಉಪವಾಸ ಸತ್ಯಾಗ್ರಹ ನಡೆಸಿದ್ದ ಶರ್ಮಿಳಾ ಕಳೆದ ಆಗಸ್ಟ್‌ನಲ್ಲಿ, ಪ್ರತಿಭಟನೆಯನ್ನು ಕೈಬಿಟ್ಟಿದ್ದರು. ಬಳಿಕ ಅಕ್ಟೋಬರ್‌ ತಿಂಗಳಲ್ಲಿ ಪೀಪಲ್ಸ್‌ ರೀಸರ್ಜೆನ್ಸ್‌್ ಆ್ಯಂಡ್‌ ಜಸ್ಟೀಸ್‌ ಅಲಯನ್ಸ್‌್ (ಪಿಆರ್‌ಜೆಎ) ಪಕ್ಷ ಸ್ಥಾಪಿಸಿ, ತೌಬಾಲ್‌ ನಿಂದ ಚುನಾವಣೆಗೆ ಸ್ಪರ್ಧಿಸಿದ್ದರು.
SCROLL FOR NEXT