ನವದೆಹಲಿ: ಸಚಿವ ಸ್ಥಾನದಿಂದ ವಜಾಗೊಂಡ ಕಪಿಲ್ ಮಿಶ್ರಾ ಮಂಗಳವಾರ ಸಿಬಿಐನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸತ್ಯೇಂದರ್ ಜೈನ್ ಮತ್ತು ಆಮ್ ಆದ್ಮಿ ಪಕ್ಷದ ನಾಯಕರ ವಿರುದ್ಧ ಮೂರು ದೂರು ನೀಡಿದ್ದಾರೆ. ವಿದೇಶಿ ಪ್ರವಾಸದ ಹೆಸರಿನಲ್ಲಿ ಪಕ್ಷದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಆಪ್ ನ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಂಡ ದೆಹಲಿಯ ಕರವಲ್ ಕ್ಷೇತ್ರದ ಶಾಸಕ ಕಪಿಲ್ ಮಿಶ್ರಾ ಐವರು ಆಪ್ ನಾಯಕರು ಕೈಗೊಂಡ ವಿದೇಶ ಪ್ರವಾಸದ ವಿವರಗಳನ್ನು ಬಹಿರಂಗಗೊಳಿಸದಿದ್ದರೆ ಉಪವಾಸ ಸತ್ಯಾಗ್ರಹವನ್ನು ಆರಂಭಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಸತ್ಯೇಂದರ್ ಜೈನ್ ಮತ್ತು ಅರವಿಂದ್ ಕೇಜ್ರಿವಾಲ್ ನಡುವೆ 2 ಕೋಟಿ ರೂಪಾಯಿ ಹಣ ವಿನಿಮಯವಾಗಿದೆ ಎಂದು ಮಿಶ್ರಾ ಸಿಬಿಐಗೆ ಸಲ್ಲಿಸಿರುವ ದೂರಿನಲ್ಲಿ ಹೇಳಿದ್ದು, ಮುಖ್ಯಮಂತ್ರಿಗಳ ಬಾವನಿಗೆ 50 ಕೋಟಿ ರೂಪಾಯಿಗಳ ಭೂ ವ್ಯವಹಾರ ನಡೆದಿದೆಯಲ್ಲದೆ ಐವರು ಆಪ್ ನಾಯಕರು ವಿದೇಶ ಪ್ರವಾಸಕ್ಕೆಂದು ಪಕ್ಷದ ನಿಧಿಯನ್ನು ಉಪಯೋಗಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಇದಕ್ಕೂ ಮುನ್ನ ಇಂದು ಬೆಳಗ್ಗೆ ಆಪ್ ಶಾಸಕ ಕಪಿಲ್ ಮಿಶ್ರಾ ತಮ್ಮ ಮಾಜಿ ಗುರುಗಳಾದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬಹಿರಂಗ ಪತ್ರ ಬರೆದು ದೂರು ದಾಖಲಿಸುವ ಮುನ್ನ ಆಶೀರ್ವಾದ ಕೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics