ದೇಶ

ಕಪಿಲ್ ಮಿಶ್ರಾ ಭ್ರಷ್ಟಾಚಾರ ಆರೋಪ: ಸತ್ಯಕ್ಕೆ ಎಂದಿಗೂ ಜಯವಿದೆ ಎಂದ ಕೇಜ್ರಿವಾಲ್

Manjula VN
ನವದೆಹಲಿ: ಸತ್ಯಕ್ಕೆ ಎಂದಿಗೂ ಜಯಿಸಲಿದ್ದು, ಜಯದ ಆರಂಭ ನಾಳೆಯ ವಿಶೇಷ ಅಧಿವೇಶನದಿಂದಲೇ ಆರಂಭವಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ. 
ಆಮ್ ಆದ್ಮಿ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ ಮಾಜಿ ಸಚಿವ ಕಪಿಲ್ ಮಿಶ್ರಾ ಅವರು ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರದ ಸರಣಿ ಆರೋಪಗಳನ್ನು ಮಾಡಿದ್ದರು. ನಿನ್ನೆಯಷ್ಟೇ ಮತ್ತೆ ಕೇಜ್ರಿವಾಲ್ ವಿರುದ್ಧ ಭೂಹಗರಣ ಮತ್ತು ಬೋಗಸ್ ಬಿಲ್ ಸೃಷ್ಟಿಯ ಗಂಭೀರ ಆರೋಪವನ್ನು ಮಾಡಿದ್ದರು. 
ಭ್ರಷ್ಟಾಚಾರ ಆರೋಪ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕೇಜ್ರಿವಾಲ್ ಅವರು, ಸತ್ಯಕ್ಕೆ ಎಂದಿಗೂ ಜಯಿಸಲಿದೆ. ಜಯದ ಆರಂಭ ನಾಳೆ ದೆಹಲಿಯಲ್ಲಿ ನಡೆಯಲಿರುವ ವಿಶೇಷ ಅಧಿವೇಶನದಿಂದಲೇ ಆರಂಭಗೊಳ್ಳಲಿದೆ ಎಂದು ಹೇಳಿಕೊಂಡಿದ್ದಾರೆ. 
ಕೇಜ್ರಿವಾಲ್ ಅವರು ತಮ್ಮ ಭಾವನಿಗಾಗಿ ರೂ.50 ಕೋಟಿ ಮೌಲ್ಯದ ಭೂಹಗರಣ ಮಾಡಿದ್ದಾರೆ. ಇದಕ್ಕಾಗಿ ಡೀಲ್ ಕುದುರಿಸಿದ್ದು ಸಚಿವ ಸತ್ಯೇಂದ್ರ ಜೈನ್. ಛತರ್ ಪುರದಲ್ಲಿ ಕೇಜ್ರಿವಾಲ್ ಅವರ ಭಾವ ಬನ್ಸಲ್ ಅವರಿಗಾಗಿ 7 ಎಕರೆ ಲ್ಯಾಂಡ್ ಡೀಲ್ ಮಾಡುತ್ತಿದ್ದೇನೆಂದು ಜೈನ್ ನನಗೆ ಹೇಳಿದ್ದರು. 
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜೈನ್ ಅವರು ಲೋಕೋಪಯೋಗಿ ಇಲಾಖೆಯಲ್ಲಿ ರೂ.10 ಕೋಟಿ ನಕಲಿ ಬಿಲ್ ಸೃಷ್ಟಿಸಿದ್ದರು ಎಂದು ಮಿಶ್ರಾ ಅವರು ಆರೋಪಿಸಿದ್ದರು. 
SCROLL FOR NEXT