ದೇಶ

ಬುದ್ಧ ಪೂರ್ಣಿಮೆ: ದೇಶದ ಜನತೆಗೆ ರಾಷ್ಟ್ರಪತಿ ಪ್ರಣಬ್, ಪ್ರಧಾನಿ ಮೋದಿ ಶುಭಾಶಯ

Manjula VN
ನವದೆಹಲಿ: ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದಾಗಿರುವ ಬುದ್ಧ ಪೂರ್ಣಿಮಾ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ದೇಶದ ಜನತೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಶುಭ ಕೋರಿದ್ದಾರೆ. 
ಬುದ್ಧ ಪೂರ್ಣಿಮೆ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನು ಕೋರಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವು, ದೈವದೂತ ಬುದ್ಧ ಉನ್ನದ ಆದರ್ಶಗಳು ಮತ್ತು ಮಾನವೀಯತೆಯ ಸಂಕೇತವಾಗಿದ್ದಾರೆ. 
ತಥಾಗತವು ಸಮಾನತೆ, ಅಹಿಂಸೆ ಮತ್ತು ಸಹಾನುಭೂತಿ ಎಂಬ ಸಂದೇಶಗಳನ್ನು ಸಾರಿದ್ದು, ಇದು ಮಾನವಕುಲಕ್ಕೆ ವಿಮೋಚನೆಯ ಹಾದಿಯ ಸಂಕೇತದ ದೀಪಗಳಾಗಿವೆ. ಬುದ್ಧನು ಸಮಾನತೆ, ಪ್ರೀತಿ, ದಯೆ ಮತ್ತು ಸಹಿಷ್ಣುತೆ ಎಂಬುದನ್ನು ಬೋಧಿಸುತ್ತಿದ್ದರು. ಬುದ್ಧ ನಡೆದ ಸತ್ಯ ಮತ್ತು ಸಹಾನುಭೂತಿಯ ಹಾದಿ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಶುಭಾಶಯ ಹೇಳಿದ್ದಾರೆ. 
ಇದರಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಟ್ವೀಟ್ ಮಾಡುವ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. 
ಇಂದು ದೇಶದ ಜನತೆ ಗೌತಮ ಬುದ್ಧನ ಆದರ್ಶಗಳನ್ನು ನೆನೆಯುತ್ತಿದ್ದಾರೆ. ಬುದ್ಧ ಉದಾತ್ತ ಆಲೋಚನೆಗಳು ಎಲ್ಲಾ ಪೀಳಿಗೆಗಳಿಗೂ ಮಾರ್ಗದರ್ಶನ ನೀಡುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಸೌಹಾರ್ದತೆಗಾಗಿ, ಸಹಾನುಭೂತಿಯಿಂದ ಸಮಾಜಕ್ಕಾಗಿ ಕಾರ್ಯ ಮಾಡುವ ಸ್ಫೂರ್ತಿಯನ್ನು ಗೌತಮ ಬುದ್ಧ ನಮಗೆ ನೀಡಿದ್ದಾನೆಂದು ತಿಳಿಸಿದ್ದಾರೆ. 
SCROLL FOR NEXT