ದೇಶ

ಎಐಎಫ್ಎಫ್ ವೆಬ್'ಸೈಟ್ ಹ್ಯಾಕ್: ಕುಲ್'ಭೂಷಣ್ ಜಾಧವ್ ಮೃತದೇಹ ಕಳುಹಿಸುತ್ತೇವೆಂದ ಹ್ಯಾಕರ್ಸ್

Manjula VN

ನವದೆಹಲಿ: ಅಖಿಲ ಭಾರತ ಫುಟ್'ಬಾಲ್ ಫೆಡರೇಷನ್ (ಎಐಎಫ್ಎಫ್) ಅಧಿಕೃತ ವೆಬ್'ಸೈಟ್ ಹ್ಯಾಕ್ ಆಗಿದ್ದು, ವೆಬ್ ಸೈಟ್'ನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್ ಅವರ ಮೃತದೇಹವನ್ನು ಭಾರತಕ್ಕೆ ಕಳುಹಿಸುತ್ತೇವೆಂದು ಸಂದೇಶವೊಂದನ್ನು ಹಾಕಿದ್ದಾರೆ. 

ಝೀರೋ ಕೂಲ್ ಎಂಬ ಅನಾಮಿಕ ಗುಂಪೊಂದು ಎಐಎಫ್ಎಫ್ ಅಧಿಕೃತ ವೆಬ್ ಸೈಟ್ ನ್ನು ಹ್ಯಾಕ್ ಮಾಡಿದೆ ಎಂದು ತಿಳಿದುಬಂದಿದೆ. ವೆಬ್ ಸೈಟ್ ಹ್ಯಾಕ್ ಮಾಡಿರುವುದಕ್ಕೆ ಯಾರು ಹೊಣೆಗಾರರು ಎಂಬುದು ಈವರೆಗೂ ತಿಳಿದುಬಂದಿಲ್ಲ. 

ವೆಬ್ ಸೈಟ್ ನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ಈ ಮೂಲಕ ದೇಶ ವಿರೋಧಿ ಸಂದೇಶಗಳನ್ನು ರವಾನಿಸಿದ್ದು, ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ ಚಿತ್ರಹಿಂಸೆ ಅನುಭವಿಸುತ್ತಿರುವ ಭಾರತೀಯ ಕುಲ್ ಭೂಷಣ್ ಜಾಧವ್ ಅವರ ಮೃತದೇಹವನ್ನು ಭಾರತಕ್ಕೆ ಕಳುಹಿಸುತ್ತೇವೆಂದು ಹೇಳಿದ್ದಾರೆ. 

ಹ್ಯಾಕ್ ಆಗುತ್ತಿದ್ದಂತೆಯೇ ಟ್ವಿಟರ್ ಮೂಲಕ ಎಐಎಫ್ಎಫ್ ಕ್ಷಣೆಯಾಚಿಸಿದೆ. ತಾಂತ್ರಿಕ ದೋಷಗಳಿಂದಾಗಿ ಸಮಸ್ಯೆಗಳು ಎದುರಾಗಿದೆ. ನಮ್ಮೊಂದಿಗಿರಿ. ಶೀಘ್ರದಲ್ಲಿ ವೆಬ್ ಸೈಟ್ ಕಾರ್ಯನಿರ್ವಹಿಸಲಿದೆ ಎಂದು ಹೇಳಿದೆ. 
SCROLL FOR NEXT