ಸಿಪಿಇಸಿ ವಿರುದ್ಧ ಪ್ರತಿಭಟನೆ
ಗಿಲ್ಗಿಟ್: ಅತ್ತ ಬೀಜಿಂಗ್ ನಲ್ಲಿ ಚೀನಾದ ಮಹತ್ವಾಕಾಂಕ್ಷಿ ಯೋಜನೆಯಾದ ಒಬಿಒಆರ್ ಸಭೆ ನಡೆಯುತ್ತಿದ್ದರೆ ಇತ್ತ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯನ್ನು ವಿರೋಧಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನತೆ ಪ್ರತಿಭಟನೆ ನಡೆಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶವಾಗಿರುವ ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ ಬೆಲ್ಟ್ ಹಾಗೂ ರೋಡ್ ಯೋಜನೆಯ ಭಾಗವಾದ ಸಿಪಿಇಸಿ ಯೋಜನೆ ವಿರೋಧಿಸಿ ಪ್ರತಿಭಟಾನೆ ನಡೆದಿದ್ದು, ಗಿಲ್ಗಿಟ್ ಬಾಲ್ಟಿಸ್ತಾನ ಯುನೈಟೆಡ್ ಚಳುವಳಿ, ಬಾಲಾವಾರಿಸ್ತಾನ್ ನ್ಯಾಷನಲ್ ಫ್ರಂಟ್ ಸೇರಿದಂತೆ ಅನೇಕ ಸಂಘಟನೆಗಳು ಸಿಪಿಇಸಿ ವಿರುದ್ಧ ಪ್ರತಿಭಟನೆ ನಡೆಸಿವೆ.
ಗಿಲ್ಗಿಟ್ ಬಾಲ್ಟಿಸ್ತಾನವನ್ನು ಅಕ್ರಮವಾಗಿ ಕಬಳಿಸುವುದು ಚೀನಾದ ಒಬಿಒಆರ್, ಸಿಪಿಇಸಿ ಯೋಜನೆಯ ಉದ್ದೇಶವಾಗಿದ್ದು, ಇಲ್ಲಿನ ಜನರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವ ಇರಾದೆ ಹೊಂದಿದೆ ಎಂದು ಸಂಘಟನೆಗಳು ಆರೋಪಿಸಿದ್ದು, ಚೀನಾದ ಏಕಚಕ್ರಾಧಿಪತ್ಯವನ್ನು ನಿಲ್ಲಿಸಿ ಎಂಬ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics