ದೇಶ

ತ್ರಿವಳಿ ತಲಾಖ್ 1,400 ವರ್ಷಗಳ ನಂಬಿಕೆಯ ವಿಷಯ: ಸುಪ್ರೀಂ ಗೆ ಎಐಎಂಪಿಎಲ್ ಬಿ

Srinivas Rao BV
ನವದೆಹಲಿ: ತ್ರಿವಳಿ ತಲಾಖ್ ವಿಚಾರಣೆಯಲ್ಲಿ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್ ಬಿ) ಸುಪ್ರೀಂ ಕೋರ್ಟ್ ಗೆ ಹೇಳಿಕೆ ನೀಡೀದ್ದು, ತ್ರಿವಳಿ ತಲಾಖ್ 1,400 ವರ್ಷಗಳ ನಂಬಿಕೆಯ ವಿಷಯವಾಗಿದೆ ಹಾಗಾಗಿ ಅದು ಇಸ್ಲಾಮಿಕ್ ಆಚರಣೆಯಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದಿದೆ. 
ತ್ರಿವಳಿ ತಲಾಖ್ 637 ರಿಂದಲೂ ಜಾರಿಯಲ್ಲಿದೆ. ಆದರೆ ಅದನ್ನು ಕೆಲವು ಇಸ್ಲಾಮಿಕ್ ಭಾಗವಲ್ಲ ಎನ್ನುತ್ತಿದ್ದಾರೆ, 1,400 ವರ್ಷಗಳ ನಂಬಿಕೆಯ ವಿಷಯವನ್ನು ಹೇಗೆ ಇಸ್ಲಾಮ್ ನ ಭಾಗವಲ್ಲ ಎಂದು ಹೇಳಲು ನಾವ್ಯಾರು? ಅದು ನಂಬಿಕೆಯ ಪ್ರಶ್ನೆಯಾದ್ದರಿಂದ ಸಾಂವಿಧಾನಿಕ ನೈತಿಕತೆ ಹಾಗೂ ಸಮಾನತೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಎಐಎಂಪಿಎಲ್ ಬಿ ಪರವಾಗಿ ತ್ರಿವಳಿ ತಲಾಖ್ ಪರ ವಾದ ಮಂಡಿಸಿರುವ ಮಾಜಿ ಕೇಂದ್ರ ಸಚಿವ, ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಹೇಳಿದ್ದಾರೆ. 
ಎಐಎಂಪಿಎಲ್ ಬಿ ಯ ಪರವಾಗಿ ವಾದ ಮಂಡಿಸಿರುವ ಕಪಿಲ್ ಸಿಬಲ್, ತ್ರಿವಳಿ ತಲಾಖ್ ವಿಷಯದಲ್ಲಿ ರಾಮನನ್ನು ಎಳೆದು ತಂದಿದ್ದು, ಭಗವಾನ್ ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದ ಎಂಬ ನಂಬಿಕೆಯಂತೆ ತ್ರಿವಳಿ ತಲಾಖ್ ಸಹ ನಂಬಿಕೆಯಾಗಿದೆ. "ಭಗವಾನ್ ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದ ಎಂಬುದು ನನ್ನ ನಂಬಿಕೆಯಾದರೆ, ಆ ವಿಷಯದಲ್ಲಿ ಸಾಂವಿಧಾನಿಕ ನೈತಿಕತೆಯ ಪ್ರಶ್ನೆ ಉದ್ಭವವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠದ ಎದುರು ಕಪಿಲ್ ಸಿಬಲ್ ವಾದ ಮಂಡಿಸಿದ್ದಾರೆ. 
ನಿಖಾ ನಾಮದ ಮೂಲಕ ವಯಸ್ಕರ ಒಪ್ಪಿಗೆಯ ಮೇರೆಗೆ ಮುಸ್ಲಿಂ ಮದುವೆ ಒಪ್ಪಂದವಾಗುತ್ತದೆ. ಹಾಗೆಯೇ ವಿಚ್ಛೇದನವೂ ಸಹ. ಮದುವೆ ಹಾಗೂ ವಿಚ್ಛೇದನ ಎರದೂ ಒಪ್ಪಂದಗಳಾದ ಮೇಲೆ ಬೇರೆಯವರಿಗೇಕೆ ಸಮಸ್ಯೆ ಇರಬೇಕು ಎಂದು ಎಐಎಂಪಿಎಲ್ ಬಿ ಪ್ರಶ್ನಿಸಿದೆ. ಇನ್ನು ಪ್ರವಾದಿ ಮೊಹಮ್ಮದ್ ಅವರ ಕಾಲಾವಧಿಯಲ್ಲೂ ಸಹ ತ್ರಿವಳಿ ತಲಾಖ್ ನ ಉಲ್ಲೇಖವಿದೆ ಎಂದು ಎಐಎಂಪಿಎಲ್ ಬಿ ಪರ ವಾದ ಮಂಡಿಸಿರುವ ಕಪಿಲ್ ಸಿಬಲ್ ಹೇಳಿದ್ದಾರೆ. 
SCROLL FOR NEXT