ದೇಶ

ಯಾವುದೇ ಪರಿಸ್ಥಿತಿಗೂ ಸಿದ್ಧರಾಗಿರಿ: ವಾಯುಪಡೆ ಅಧಿಕಾರಿಗಳಿಗೆ ಬಿ.ಎಸ್. ಧನೋವಾ ಸೂಚನೆ

Manjula VN

ನವದೆಹಲಿ: ನಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಅತ್ಯಂತ ಶೀಘ್ರವಾಗಿ ಕಾರ್ಯಾಚರಣೆಗೆ ಸಿದ್ಧರಾಗಬೇಕೆಂದು ವಾಯುಪಡೆ ಸಿಬ್ಬಂದಿಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್ ಧನೋವಾ ಅವರು ಭಾರತೀಯ ವಾಯುಪಡೆಯ (ಐಎಎಫ್) ಪ್ರತಿಯೊಬ್ಬ ಅಧಿಕಾರಿಗಳಿಗೂ ವೈಯಕ್ತಿಕ ಪತ್ರದ ಮೂಲಕ ಸೂಚನೆ ನೀಡಿದ್ದಾರೆಂದು ಶನಿವಾರ ತಿಳಿದುಬಂದಿದೆ. 

ಪ್ರಸ್ತುತ ಇರುವ ಪರಿಸ್ಥಿತಿಯನ್ನು ಗಮನಿಸಿದರೆ, ಸುಧೀರ್ಘವಾಗಿ ಸಾಂಪ್ರದಾಯಿಕ ಬಾಹ್ಯ ಬೆದರಿಕೆ ಎದುರಾಗುತ್ತಿದೆ. ಈ ಹಿನ್ನಲೆಯಲ್ಲಿ ಯಾವುದೇ ಸಮಯದಲ್ಲೂ ಬೇಕಾದರೂ ಕಾರ್ಯಾಚರಣೆ ನಡೆಸಬೇಕಾದ ಅಗತ್ಯತೆ ಎದುರಾಗಬಹುದು. ಹೀಗಾಗಿ ವಾಯುಪಡೆ ಸದಾಕಾಲ ಸನ್ನದ್ಧರಾಗಿರಬೇಕೆಂದು ದನೋವಾ ಅವರು ಪತ್ರದಲ್ಲಿ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ. 

ಸಾಂಪ್ರದಾಯಿಕ ಬಾಹ್ಯ ಬೆದರಿಕೆಗಳ ಮೂಲಕ ಪಾಕಿಸ್ತಾನ ಯುದ್ಧಕ್ಕೆ ತಯಾರಾಗುತ್ತಿದೆ. ಇದರ ಪರಿಣಾಮದಿಂದಾಗಿಯೇ ಸೇನಾ ನೆಲೆಗಳ ಮೇಲೆ ಉಗ್ರರ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಹಿಂಸಾಚಾರ ಹೆಚ್ಚಾಗತೊಡಗಿದೆ. ಉಪಖಂಡದಲ್ಲಿ ಸಾಂಪ್ರದಾಯಿಕ ಬೆದರಿಕೆ ಬರುತ್ತಿರುವ ಹಿನ್ನಲೆಯಲ್ಲಿ ನಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಕಾರ್ಯಾಚರಣೆಗೆ ಸಜ್ಜಾಗಿರಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಗಮನ ಹರಿಸಲು ತರಬೇತಿಯ ಅಗತ್ಯವೂ ಇದೆ ಎಂದು ವಾಯಪಡೆ ಮುಖ್ಯಸ್ಥರು ಪತ್ರದಲ್ಲಿ ಹೇಳಿದ್ದಾರೆ. 
SCROLL FOR NEXT