ಇಂಡೊ-ಚೀನಾ ಸಂಬಂಧ ವೃದ್ಧಿ ಗಡಿಯಲ್ಲಿ ಆತಂಕ ಕಡಿಮೆ ಮಾಡಿದೆ: ರಾಜನಾಥ್ ಸಿಂಗ್
ಭಾರತ-ಚೀನಾ ಗಡಿ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಕುರಿತು ಪರಾಮರ್ಶೆ...
ಗಾಂಗ್ ಟಾಕ್(ಸಿಕ್ಕಿಂ): ಭಾರತ-ಚೀನಾ ಗಡಿ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಕುರಿತು ಪರಾಮರ್ಶೆ ನಡೆಸಿದ ರಾಜನಾಥ್ ಸಿಂಗ್, ನೆರೆ ದೇಶಗಳ ನಡುವಣ ಸಂಬಂಧ ಉತ್ತಮವಾಗಿದ್ದು, ಇದರಿಂದ ಎರಡು ದೇಶಗಳ ನಡುವಣ ವಿವಾದ ಕಡಿಮೆಯಾಗಿದೆ ಎಂದು ಹೇಳಿದರು.
ಭಾರತ-ಚೀನಾ ಗಡಿ ಭಾಗಗಳ ನಡುವಣ ವಿವಾದಕ್ಕೆ ಸಂಬಂಧಪಟ್ಟಂತೆ ಗ್ರಹಿಕೆ ವ್ಯತ್ಯಾಸಗಳಿವೆ. ಮಾತುಕತೆ ನಡೆಯುತ್ತಿದೆ. ಭಾರತ-ಚೀನಾ ಸಂಬಂಧ ಉತ್ತಮವಾಗಿದ್ದು ಇದರಿಂದಾಗಿ ಎರಡೂ ದೇಶಗಳ ನಡುವೆ ಕದನ ಕಡಿಮೆಯಾಗಿದೆ ಎಂದರು.
ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಅವರು ಪರಿಶೀಲನೆ ನಡೆಸಿದರು.
ಭಾರತ-ಚೀನಾ ಗಡಿ ಭಾಗದಲ್ಲಿ ನಡೆಯುತ್ತಿರುವ ಮೂಲಭೂತ ಅಭಿವೃದ್ಧಿ ಕೆಲಸಗಳ ಕುರಿತು ಇಂದಿನ ಸಭೆಯಲ್ಲಿ ಪರಾಮರ್ಶೆ ನಡೆಸಲಾಯಿತು. ಗೃಹ ಸಚಿವಾಲಯ 27 ರಸ್ತೆಗಳ ಕಾಮಗಾರಿ ನಡೆಸುತ್ತಿದ್ದು ಅವುಗಳ ನಿರ್ಮಾಣ ಕಾರ್ಯ 2019-20ರ ವೇಳೆಗೆ ಪೂರ್ಣಗೊಳ್ಳಲಿದೆ. 48 ಇತರ ರಸ್ತೆಗಳ ಅನುಮೋದನೆ ಪ್ರಕ್ರಿಯೆ ಆರಂಭಗೊಂಡಿದೆ ಎಂದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.