ಮುಂಬೈ: ಪ್ರತಿ ಜನವರಿ 24 ನ್ನು ಉತ್ತರ ಪ್ರದೇಶ ದಿನವನ್ನಾಗಿ ಆಚರಣೆ ಮಾಡುವ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಕ್ರಮವನ್ನು ರಾಜ್ಯಪಾಲ ರಾಮ್ ನಾಯ್ಕ್ ಸ್ವಾಗತಿಸಿದ್ದಾರೆ.
ಯೋಗಿ ಆದಿತ್ಯನಾಥ್ ದೂರದೃಷ್ಟಿಯ ಆಡಳಿತಗಾರರು. ಉತ್ತರ ಪ್ರದೇಶ ದಿನವನ್ನು ಆಚರಿಸುವ ಪ್ರಸ್ತಾವನೆ ನೀಡಿದ ಬೆನ್ನಲ್ಲೇ ಅದನ್ನು ಗಂಭೀರವಾಗಿ ಪರಿಗಣಿಸಿದ ಯೋಗಿ ಆದಿತ್ಯನಾಥ್, ಮರುದಿನವೇ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದಿದ್ದಾರೆ. ಎಂದು ರಾಮ್ ನಾಯ್ಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಭಿಯಾನ್ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ರಾಜ್ಯಪಾಲ ರಾಮ್ ನಾಯ್ಕ್, ಕಳೆದ 28 ವರ್ಷಗಳಿಂದ ಮುಂಬೈ ನಲ್ಲಿ ಉತ್ತರ ಪ್ರದೇಶ ದಿನವನ್ನು ಆಚರಿಸುತ್ತಿರುವ ಮುಂಬೈ ನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮರ್ ಜೀತ್ ಮಿಶ್ರಾ ಅವರ ಬಗ್ಗೆಯೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಉತ್ತರ ಪ್ರದೇಶ ದಿನಾಚರಣೆ ಬಗ್ಗೆ ದಾಖಲೆಗಳನ್ನು ಒದಗಿಸುವಂತೆ ಕೇಳಿದ್ದೆ, ಅಮರ್ ಜಿತ್ ಮಿಶ್ರಾ ಅವರು ಒದಗಿಸಿದ್ದ ಎಲ್ಲಾ ದಾಖಲೆಗಳನ್ನು ಯೋಗಿ ಆದಿತ್ಯನಾಥ್ ಗೆ ರವಾನಿಸಿದೆ. ಯೋಗಿ ಆದಿತ್ಯನಾಥ್ ಕೇವಲ ಒಂದು ದಿನದಲ್ಲೇ ಅದನ್ನು ಅನುಮೋದಿಸಿದರು ಎಂದು ರಾಜ್ಯಪಾಲ ರಾಮ್ ನಾಯ್ಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.