ನವದೆಹಲಿ: ಕಾಶ್ಮೀರದ ಕಣಿವೆಯ ಸ್ಥಿತಿ ಕೈಮೀರಿ ಹೋಗಿದ್ದು ಸರ್ಕಾರ ಅದನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಜೆಡಿಯು ನಾಯಕ ಶರದ್ ಯಾದವ್ ಹೇಳಿದ್ದಾರೆ.
ಕಾಶ್ಮೀರ ಕಣಿವೆಯ ಬಗ್ಗೆ ರಾಷ್ಟ್ರ ಮಟ್ಟದ ಸಮ್ಮೇಳನ ನಡೆಸಲು ಯತ್ನಿಸುತ್ತಿರುವ ನಡೆಸಿರುವ ಜೆಡಿಯು ನಾಯಕ ಶರದ್ ಯಾದವ್ ಕಾಂಗ್ರೆಸ್, ಸಿಪಿಐ(ಎಂ) ಪಕ್ಷ ಹಾಗೂ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸರ್ಕಾರೇತರ ನಿಯೋಗದ ಸದಸ್ಯರಾಗಿದ್ದ ಬಿಜೆಪಿ ಸದಸ್ಯ ಯಶ್ವಂತ್ ಸಿನ್ಹಾ ಅವರನ್ನು ಭೇಟಿ ಮಾಡಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಜಮ್ಮು-ಕಾಶ್ಮೀರದ ಪರಿಸ್ಥಿತಿ ಹದಗೆಟ್ಟು, ಕೈ ಮೀರಿ ಹೋಗಿದೆ. ಕಾಶ್ಮೀರ ಕಣಿವೆಯಲ್ಲಿ ಶಾಂತಿಯನ್ನು ಮರುಸ್ಥಾಪನೆ ಮಾಡುವುದು ಸವಾಲಿನ ವಿಷಯವಾಗಿದ್ದು ಕಣಿವೆ ಭಯೋತ್ಪಾದಕರ ಕೈಗೆ ಸಿಲುಕಿದೆ. ಸರ್ಕಾರಕ್ಕೆ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಶರದ್ ಯಾದವ್ ಹೇಳಿದ್ದಾರೆ.