ನವದೆಹಲಿ: 19 ಜನರ ಸಾವಿಗೆ ಕಾರಣವಾದ ಬ್ರಿಟನ್ನ ಪ್ರಸಿದ್ಧ ಕೈಗಾರಿಕಾ ನಗರ ಮ್ಯಾಂಚೆಸ್ಟರ್ ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.
" ಮ್ಯಾಂಚೆಸ್ಟರ್ ನಲ್ಲಿ ನಡೆದಿರುವ ದಾಳಿಯಿಂದ ಮನ ನೊಂದಿದೆ. ಭಾರತ ಮ್ಯಾಂಚೆಸ್ಟರ್ ದಾಳಿಯನ್ನು ಖಂಡಿಸುತ್ತದೆ. ಮೃತಪಟ್ಟ ಕುಟುಂಬದೊಂದಿಗೆ ನಮ್ಮ ಸಾಂತ್ವನ ಇರಲಿದೆ. ಗಾಯಗೊಂಡವರು ಗುಣಮುಖರಾಗಲೆಂದು ಪ್ರಾರ್ಥಿಸುತ್ತೇವೆ ಎಂದು ಮೋದಿ ಟ್ವೀಟ್ ನಲ್ಲಿ ಹೇಳಿದ್ದಾರೆ.
ಮ್ಯಾಂಚೆಸ್ಟರ್ ಲ್ಲಿರುವ ಅರೇನಾ ಸ್ಟೇಡಿಯಂ ಮುಂಭಾಗದಲ್ಲಿ ಬಾಂಬ್ ಸ್ಫೋಟಿಸಿದ ಪರಿಣಾಮ 19 ಜನರು ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಮೆರಿಕದ ಖ್ಯಾತ ಪಾಪ್ ಗಾಯಕಿ ಅರಿಯಾನಾ ಗ್ರಾಂಡೆ ಅವರ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ.