ದೇಶ

ಕೇಂದ್ರದಿಂದ ನೆರವು ಹೇಳಿಕೆ: ಅಮಿತ್ ಶಾ ಕ್ಷಮೆಯಾಚಿಸುವಂತೆ ತೆಲಂಗಾಣ ಸಿಎಂ ಆಗ್ರಹ

Manjula VN
ಹೈದರಾಬಾದ್: ತೆಲಂಗಾಣ ರಾಜ್ಯಕ್ಕೆ ಕೇಂದ್ರ ಪ್ರತೀ ವರ್ಷ ಹೆಚ್ಚುವರಿಯಾಗಿ ರೂ. 1 ಲಕ್ಷ ಕೋಟಿ ನೆರವು ನೀಡುತ್ತಿದೆ ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೇಳಿಕೆಗೆ ತೆಲಂಗಾಣ ರಾಜ್ಯ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತೀವ್ರವಾಗಿ ಕೆಂಡ ಕಾರಿದ್ದು, ಹೇಳಿಕೆ ಕುರಿತಂತೆ ಕೂಡಲೇ ಕ್ಷಮೆಯಾಚಿಸುವಂತೆ ಗುರುವಾರ ಆಗ್ರಹಿಸಿದ್ದಾರೆ. 
ಅಮಿತ್ ಶಾ ಅವರ ಹೇಳಿಕೆ ಕುರಿತಂತೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿರುವ ಅವರು, ಅಮಿತ್ ಶಾ ಅವರ ಹೇಳಿಕೆ ಶುದ್ಧ ಸುಳ್ಳು. ತೆಲಂಗಾಣ ರಾಜ್ಯದಿಂದ ಹೊರಗೆ ಹೋಗುವುದಕ್ಕೂ ಮುನ್ನ ಅಮಿತ್ ಶಾ ಅವರು ಬೇಷರತ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. 
ಮೂರು ದಿನಗಳಿಂದಲೂ ತೆಲಂಗಾಣ ಸರ್ಕಾರದ ವಿರುದ್ಧ ಅಮಿತ್ ಶಾ ಮಾತನಾಡುತ್ತಿರುವುದನ್ನು ನೋಡುತ್ತಿದ್ದೇನೆ. ಮೋದಿಯವರ ಬಗ್ಗೆ ನನಗೆ ಅಪಾರ ಗೌರವವಿದೆ. ಕಳೆದ ಮೂರು ವರ್ಷಗಳಿಂದ ಯಾವೊಂದು ಸಣ್ಣ ಹಗರಣಗಳೂ ಕೂಡ ನಡೆದಿಲ್ಲ. ಆದರಹೆ, ಅಮಿತ್ ಶಾ ಅವರ ಹೇಳಿಕೆ ನನಗೆ ಬೇಸರವನ್ನು ತಂದಿದೆ. ಈ ರೀತಿಯ ಹೇಳಿಕೆಗಳನ್ನು ನೀಡುವುದರಿಂದ ಅಮಿತ್ ಶಾ ಅವರ ಘನತೆ ಹಾಗೂ ಖ್ಯಾತಿ ಹೆಚ್ಚಾಗುವುದಿಲ್ಲ. 
ತಾಳ್ಮೆ ಹಾಗೂ ಸಹನೆಗೂ ಮಿತಿ ಎಂಬುದಿರುತ್ತದೆ. ಶಾ ಅವರು ಇದೇ ರೀತಿಯ ಸುಳ್ಳುಗಳನ್ನು ಹೇಳುತ್ತಿದ್ದರೆ, ನಾವು ಸುಮ್ಮನೆ ಇರುವುದಿಲ್ಲ.ಕೇಂದ್ರ ನೀಡುತ್ತಿರುವ ನೆರವು ಕುರಿತಂತೆ ಈಗಾಗಲೇ ನಾವು ಪಟ್ಟಿ ತಯಾರಿಸಿದ್ದೇವೆ. ಕೇಂದ್ರ ಸರ್ಕಾರ ನೆರವು ನೀಡುತ್ತಿರುವುದನ್ನು ಬಿಜೆಪಿ ಸಾಬೀತುಪಡಿಸಲು. ನಂತರ ನಾನು ನನ್ನ ಸ್ಥಾನಕ್ಕೆ ರಾಜಿನಾಮೆಯನ್ನು ಸಲ್ಲಿಸುತ್ತೇನೆಂದು ತಿಳಿಸಿದ್ದಾರೆ. 
SCROLL FOR NEXT