ಆಂಧ್ರಪ್ರದೇಶ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರಾಜಕುಮಾರಿ 
ದೇಶ

ಚಾಕು ರೆಡಿ ಇಟ್ಕೊಳ್ಳಿ, ಅತ್ಯಾಚಾರಕ್ಕೆ ಬಂದರೆ ಮರ್ಮಾಂಗ ಕತ್ತರಿಸಿ: ಆಂಧ್ರ ಪ್ರದೇಶ ಮಹಿಳಾ ಆಯೋಗದ ಅಧ್ಯಕ್ಷೆ

ಮಹಿಳೆಯರು ಸದಾ ತಮ್ಮ ಬಳಿ ಚಾಕುವನ್ನು ಇಟ್ಟಿಕೊಂಡಿರಬೇಕು. ಯಾರಾದರೂ ಅತ್ಯಾಚಾರ ಎಸಗಲು ಬಂದರೆ, ತಕ್ಷಣವೇ ಅವರ ಮರ್ಮಾಂಗವನ್ನು ಕತ್ತರಿಸಿ ಹಾಕಬೇಕು...

ಹೈದರಾಬಾದ್: ಮಹಿಳೆಯರು ಸದಾ ತಮ್ಮ ಬಳಿ ಚಾಕುವನ್ನು ಇಟ್ಟಿಕೊಂಡಿರಬೇಕು. ಯಾರಾದರೂ ಅತ್ಯಾಚಾರ ಎಸಗಲು ಬಂದರೆ, ತಕ್ಷಣವೇ ಅವರ ಮರ್ಮಾಂಗವನ್ನು ಕತ್ತರಿಸಿ ಹಾಕಬೇಕು ಎಂದು ಆಂಧ್ರಪ್ರದೇಶ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರಾಜಕುಮಾರಿಯವರು ಗುರುವಾರ ಕರೆ ನೀಡಿದ್ದಾರೆ. 
ಮೇ.20 ರಂದು 8 ಮಂದಿಯಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಬುಡಕಟ್ಟು ಬಾಲಕಿಯರ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಬಳಿಕ ರಾಜಕುಮಾರಿಯವರು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಮಹಿಳೆಯರು ಸದಾ ಕಾಲ ತಮ್ಮ ಬಳಿ ಚಾಕುವನ್ನು ಇಟ್ಟುಕೊಂಡಿರಬೇಕು. ಕೆಲ ಪುರುಷರು ಮೃಗರಂತೆ ವರ್ತಿಸಿದರೆ, ದೌರ್ಜನ್ಯವೆಸಗಿದರೆ, ಅವರ ಮರ್ಮಾಂಗವನ್ನು ಕತ್ತರಿಸಿ ಹಾಕಬೇಕು. ಇದಕ್ಕೆ ಕಾನೂನಿನ ಅಗತ್ಯವಿದೆ. ಅತ್ಯಾಚಾರಿಗಳನ್ನು ಬೆತ್ತಲೆಗೊಳಿಸಿ, ಸಾರ್ವಜನಿಕವಾಗಿ ಮೆರವಣಿಗೆ ಮಾಡಬೇಕು. ಅತ್ಯಾಚಾರಿಗಳಂತಹ ಕ್ರಿಮಿನಲ್ ಗಳಿಂದ ರಕ್ಷಿಸಿಕೊಳ್ಳಲು ಕಾಲೇಜು ಯುವತಿಗಳಿಗೆ ಚಾಕುಗಳನ್ನು ನೀಡಬೇಕು ಎಂದು ಹೇಳಿದ್ದಾರೆ. 
ಅತ್ಯಾಚಾರಿಗಳ ಚರ್ಮವನ್ನು ಸುಲಿಯುತ್ತೇವೆ. ಅತ್ಯಾಚಾರಿಗಳನ್ನು ಬಂಧಿಸಿದ ಬಳಿಕ ಪೊಲೀಸರು ಕಾಮುಕರ ಮುಖವನ್ನು ಮುಚ್ಚಬಾರದು. ಅವರನ್ನು ಬೆತ್ತಲೆಗೊಳಿಸಿ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಬೇಕು. ಚಪ್ಪಲಿ ಹಾಗೂ ಪೊರಕೆಯಲ್ಲಿ ಹೊಡೆದು ನಂತರ ಪೊಲೀಸ್ ಠಾಣೆಯೊಳಗೆ ಕೂರಿಸಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel