ದೇಶ

ಮಣಿಪುರ ಸಿಎಂ ಬಿರೇನ್ ಸಿಂಗ್ ಪುತ್ರನಿಗೆ 5 ವರ್ಷ ಜೈಲು ಶಿಕ್ಷೆ

Vishwanath S
ಇಂಫಾಲ: ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಪುತ್ರ ಅಜಯ್ ಮಿತಾಯಿ ಯುವಕನೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯ ಅಜಯ್ ಮಿತಾಯಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ. 
2011ರಲ್ಲಿ ತನ್ನ ಕಾರಿಗೆ ಜಾಗ ಬಿಡಲಿಲ್ಲ ಎಂಬ ಕಾರಣಕ್ಕೆ ಅಜಯ್ ಮಿತಾಯಿ ಇರೋಮ್ ರೋಜರ್ ಎಂಬಾತನೊಂದಿಗೆ ಜಗಳವಾಡಿದ್ದ ಅಲ್ಲದೆ ತನ್ನ ಬಳಿಯಿದ್ದ ಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದ ಈ ಪ್ರರಣಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ತೀರ್ಪು ಬಂದಿದ್ದು ಆರೋಪಿಗೆ ಕೋರ್ಟ್ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ. 
ಕಳೆದ ವಾರವಷ್ಟೇ ಅಜಯ್ ಮಿತಾಯಿಯಿಂದ ಕೊಲೆಯಾಗಿದ್ದ ಇರೋಮ್ ರೋಜರ್ ಹೆತ್ತವರ ತಮಗೆ ಸುರಕ್ಷತೆಯ ಭೀತಿ ಕಾಡುತ್ತಿದೆ ಎಂದು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಂಬಂಧ ಕೇಂದ್ರ ಹಾಗೂ ಮಣಿಪುರ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಇದಾದ ಒಂದು ವಾರದ ಬಳಿಕೆ ಸ್ಥಳೀಯ ನ್ಯಾಯಾಲಯ ಈ ತೀರ್ಪು ನೀಡಿದೆ. 
SCROLL FOR NEXT