ನವದೆಹಲಿ: ಸಾಮಾನ್ಯವಾಗಿ ಹುಟ್ಟಿದ ಮಕ್ಕಳು 1 ವರ್ಷದ ಬಳಿಕ ಓಡಾಡುವುದನ್ನು ನೋಡಿದ್ದೇವೆ, ಆದರೆ, ಇಲ್ಲೊಂದು ಮಗು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ನಡೆದಾಡಿದೆ. ವಿಚಿತ್ರ, ವಿಸ್ಮಯವೆಂದರೂ ಇದು ಸತ್ಯ.
ನವಜಾತ ಶಿಶುವೊಂದು ವೈದ್ಯರ ಸಹಾಯದಿಂದ ನಡೆದಾಡುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸುಮಾರು 41 ಸೆಕೆಂಡುಗಳ ಈ ವಿಡಿಯೋವನ್ನು 5 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದು, 13 ಲಕ್ಷ ಮಂದಿ ಶೇರ್ ಮಾಡಿದ್ದಾರೆ. ವೈದ್ಯರೊಬ್ಬರ ಸಹಾಯದಿಂದ ಮಗು ಹಾಸಿಗೆಯ ಮೇಲೆಯೇ ನಡೆಸುತ್ತಿರುವ ಈ ವಿಡಿಯೋವನ್ನು ಬ್ರೆಝಿಲ್ ನಿಂದ ಪೋಸ್ಟ್ ಮಾಡಲಾಗಿದೆ. ಆದರೆ, ವಿಡಿಯೋವನ್ನು ಯಾವಾಗ ರೆಕಾರ್ಡ್ ಮಾಡಲಾಗಿದೆ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ.