ನೋಟು ನಿಷೇಧದ ಎಫೆಕ್ಟ್: 2016-17 ನೇ ಸಾಲಿನಲ್ಲಿ ಜಿಡಿಪಿ ಶೇ.7.1 ಕ್ಕೆ ಕುಸಿತ
2016-17 ನೇ ಸಾಲಿನ ಜಿಡಿಪಿ ಅಂಕಿ-ಅಂಶ ಬಿಡುಗಡೆಯಾಗಿದ್ದು, ನೋಟು ನಿಷೇಧದ ಪರಿಣಾಮದಿಂದಾಗಿ ಜಿಡಿಪಿ ಶೇ.7.1 ಕ್ಕೆ ಕುಸಿದಿದೆ.
ನವದೆಹಲಿ: 2016-17 ನೇ ಸಾಲಿನ ಜಿಡಿಪಿ ಅಂಕಿ-ಅಂಶ ಬಿಡುಗಡೆಯಾಗಿದ್ದು, ನೋಟು ನಿಷೇಧದ ಪರಿಣಾಮದಿಂದಾಗಿ ಜಿಡಿಪಿ ಶೇ.7.1 ಕ್ಕೆ ಕುಸಿದಿದೆ.
ಕೃಷಿ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಯಾಗಿರುವುದರ ಹೊರತಾಗಿಯೂ ಜಿಡಿಪಿ ಕಡಿಮೆಯಾಗಿದೆ. ನ.8 ರಂದು ಕೇಂದ್ರ ಸರ್ಕಾರ 500, 1000 ರೂ ನೋಟುಗಳನ್ನು ನಿಷೇಧ ಮಾಡಿದ್ದರ ಪರಿಣಾಮವಾಗಿ ಜನವರಿ-ಮಾರ್ಚ್ ತಿಂಗಳ ಜಿಡಿಪಿ ಮೇಲೆ ಪರಿಣಾಮ ಬೀರಿದ್ದು, ಶೇ.7.9 ರಷ್ಟಿದ್ದ ಜಿಡಿಪಿ ದರ ಈಗ ಶೇ.7.1 ರಷ್ಟಿದೆ.
ಕೇಂದ್ರ ಅಂಕಿ-ಅಂಶಗಳ ಕಚೇರಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಜಿವಿಎ ಶೇ.7.9 ರಿಂದ ಶೇ.6.6 ಕ್ಕೆ ಕುಸಿತ ಕಂಡಿದೆ ಎಂದು ತಿಳಿದುಬಂದಿದೆ. ಮೂರು- ನಾಲ್ಕನೇ ತ್ರೈಮಾಸಿಕದಲ್ಲಿ ಸತತವಾಗಿ ಜಿವಿಎ ಕುಸಿತ ಕಂಡಿರುವುದು ಸಹ ಜಿಡಿಪಿ ಕುಸಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು ನಾಲ್ಕನೇ ತ್ರೈಮಾಸಿಕದಲ್ಲಿ ಉತ್ಪಾದನಾ ವಲಯ ಸಹ ಕುಸಿದಿದ್ದು ಕಳೆದ ವರ್ಷ ಶೇ. 12.7 ರಷ್ಟಿದ್ದ ಉತ್ಪಾದನಾ ವಲಯದ ಜಿಡಿಪಿ ಈಗ ಶೇ.5.3 ರಷ್ಟಾಗಿದ್ದರೆ, ಕಟ್ಟಡ ನಿರ್ಮಾಣ ಕ್ಷೇತ್ರ ಋಣಾತ್ಮಕ ಅಂಶಕ್ಕೆ ಕುಸಿದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.