ಸಂಗ್ರಹ ಚಿತ್ರ 
ದೇಶ

ಬುರ್ಹಾನ್ ವಾನಿ, ಸಬ್ಜಾರ್ ಭಟ್ ಹತ್ಯೆ ನಂತರ 27 ಹೊಸ ಯುವಕರಿಗೆ ಹಿಬ್ಜುಲ್ ತರಬೇತಿ!

ಬುರ್ಹಾನ್ ವಾನಿ, ಸಬ್ಜಾರ್ ಭಟ್ ಹತ್ಯೆಯ ಬೆನ್ನಲ್ಲೇ 27 ಯುವ ಉಗ್ರರ ಪಡೆಯೊಂದನ್ನು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸಜ್ಜುಗೊಳಿಸಿದ್ದು, ಕಾಶ್ಮೀರದಲ್ಲಿ ಮತ್ತಷ್ಟು ಹಿಂಸಾಚಾರ ಸೃಷ್ಟಿಸಲು ಸಂಚು ರೂಪಿಸಿ ಭಾರತದೊಳಗೆ...

ಶ್ರೀನಗರ: ಬುರ್ಹಾನ್ ವಾನಿ, ಸಬ್ಜಾರ್ ಭಟ್ ಹತ್ಯೆಯ ಬೆನ್ನಲ್ಲೇ 27 ಯುವ ಉಗ್ರರ ಪಡೆಯೊಂದನ್ನು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸಜ್ಜುಗೊಳಿಸಿದ್ದು, ಕಾಶ್ಮೀರದಲ್ಲಿ ಮತ್ತಷ್ಟು ಹಿಂಸಾಚಾರ ಸೃಷ್ಟಿಸಲು ಸಂಚು ರೂಪಿಸಿ ಭಾರತದೊಳಗೆ ನುಸುಳಿಸಲು ಮುಂದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 
ಈ ಎಲ್ಲಾ 27 ಉಗ್ರರಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿಯೇ ತರಬೇತಿ ನೀಡಲಾಗಿದ್ದು, ಉಗ್ರರ ಫೋಟೋಸೆಷನ್ ಕೂಡ ನಡೆಸಲಾಗಿದೆ. 
27 ಹೊಸ ಹಿಜ್ಬುಲ್ ಉಗ್ರ ಪಡೆಯ ಫೋಟೋಗಳನ್ನು ಹಿಜ್ಬುಲ್ ಉಗ್ರ ಸಂಘಟನೆ ಬಿಡುಗಡೆ ಮಾಡಿದ್ದು, ಇದೀಗ ಈ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 
2015ರಲ್ಲಿ ಹಿಬ್ಜುಲ್ ಉಗ್ರ ಸಂಘಟನೆ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿ ತನ್ನ 11 ಸಂಗಡಿಗರ ಫೋಟೋವೊಂದನ್ನು ಬಿಡುಗಡೆ ಮಾಡಿದ್ದ. ಈ ಪೈಕಿ 9 ಉಗ್ರರನ್ನು ಭಾರತೀಯ ಸೇನಾಪಡೆ ಹತ್ಯೆ ಮಾಡಿದೆ. ಇದರ ಬೆನ್ಲಲ್ಲೇ ಇದೀಗ ಉಗ್ರ ಪಡೆಗಳು ಮತ್ತೆ ಹೊಸ ಫೋಟೋವನ್ನು ಬಿಡುಗಡೆ ಮಾಡಿದ್ದು, ಮತ್ತಷ್ಟು ದಾಳಿ ನಡೆಸುವ ಸುಳಿವು ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!