ಕಾಶ್ಮೀರದಲ್ಲಿ ಇನ್ನೂ 115 ಉಗ್ರರು ಸಕ್ರಿಯ: ಭಾರತೀಯ ಸೇನೆ!
ದಕ್ಷಿಣ ಕಾಶ್ಮೀರದಲ್ಲಿ ಇನ್ನೂ 115 ಮಂದಿ ಉಗ್ರರು ಸಕ್ರಿಯವಾಗಿ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಭಾರತೀಯ ಸೇನೆ ಶುಕ್ರವಾರ ನೀಡಿದೆ.
ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಇನ್ನೂ 115 ಮಂದಿ ಉಗ್ರರು ಸಕ್ರಿಯವಾಗಿ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಭಾರತೀಯ ಸೇನೆ ಶುಕ್ರವಾರ ನೀಡಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಭಾರತೀಯ ಸೇನೆ ಮೇಜರ್ ಜನರಲ್ ಬಿಎಸ್ ರಾಜು ಅವರು, ದಕ್ಷಿಣ ಕಾಶ್ಮೀರದಲ್ಲಿ ಈಗಲೂ 115 ಉಗ್ರಗಾಮಿಗಳು ಸಕ್ರಿಯ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ. ಈ ಪೈಕಿ 99 ಮಂದಿ ಉಗ್ರರ ಸ್ಥಳೀಯರಾಗಿದ್ದರೆ, 15 ಮಂದಿ ವಿದೇಶಗಳಿಂದ ಅಕ್ರಮವಾಗಿ ಗಡಿಯೊಳಗೆ ನುಸುಳಿರುವ ಉಗ್ರಗಾಮಿಗಳಾಗಿದ್ದಾರೆ ಎಂದು ಹೇಳಿದರು.
ಆಂತೆಯೇ ಭಾರತೀಯ ಸೇನೆ ಕಾಶ್ಮೀರದಲ್ಲಿ ನಡೆಸಿದ ವಿವಿಧ ಕಾರ್ಯಾಚರಣೆಗಳಲ್ಲಿ ಕಳೆದ ಆರು ತಿಂಗಳಲ್ಲಿ ಒಟ್ಟು 80 ಮಂದಿ ಉಗ್ರರು ಹತರಾಗಿದ್ದಾರೆ ಎಂದು ಬಿಎಸ್ ರಾಜು ತಿಳಿಸಿದರು.
ಇನ್ನು ನಿನ್ನೆಯಷ್ಚೇ ಸೇನೆಯ ಮೇಲೆ ದಾಳಿಗೆ ಮುಂದಾಗಿದ್ದ ಉಗ್ರಗಾಮಿಗಳ ಹುಟ್ಟಡಗಿಸಿದ ಸೇನೆ, ಪುಲ್ವಾಮ ಜಿಲ್ಲೆಯ ಸಂಬೂರ ಗ್ರಾಮದಲ್ಲಿ ಓರ್ವ ಉಗ್ರನನ್ನು ಸೆದೆಬಡಿದಿತ್ತು. ಇಂದು ಆತನ ವಿವರವನ್ನು ಸೇನೆ ಮಾಧ್ಯಮಗಳಿಗೆ ನೀಡಿದ್ದು, ಹತನಾದ ಉಗ್ರನನ್ನು ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಉಗ್ರಗಾಮಿ ಎಂದು ಗುರುತಿಸಲಾಗಿದೆ. ಅತನ ಹೆಸರು ಬಾದರ್ ಎಂದು ತಿಳಿದುಬಂದಿದ್ದು, ಈತ ಕಳೆದ ಹಲವು ವರ್ಷಗಳಿಂದ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಈತ ಕೂಡ ದಕ್ಷಿಣ ಕಾಶ್ಮೀರಕ್ಕೆ ಸೇರಿದವನು ಎಂದು ಬಿಎಸ್ ರಾಜು ಅವರು ಮಾಹಿತಿ ನೀಡಿದ್ದಾರೆ.