ಕಮಲ್ ಹಾಸನ್ 
ದೇಶ

ಕಮಲ್ ಹಾಸನ್‌ ಅವರನ್ನು ಗುಂಡಿಟ್ಟು ಕೊಲ್ಲಬೇಕು: ಹಿಂದೂ ಮಹಾಸಭಾ ಮುಖಂಡ

ದೇಶದಲ್ಲಿ ಹಿಂದೂ ಭಯೋತ್ಪದನೆ ಇದೆ ಎಂದು ಹೇಳಿಕೆ ನೀಡಿರುವ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಅಖಿಲ ಭಾರತೀಯ...

ಲಖನೌ: ದೇಶದಲ್ಲಿ ಹಿಂದೂ ಭಯೋತ್ಪದನೆ ಇದೆ ಎಂದು ಹೇಳಿಕೆ ನೀಡಿರುವ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾ ಮುಖಂಡರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಕಮಲ್ ಹಾಸನ್ ರಂತವರು ಹಿಂದೂ ಭಯೋತ್ಪಾದಕರ ಅನುಯಾಯಿಗಳು ತಮ್ಮು ಪಕ್ಷಪಾತದ ಕೋಮು ಅಜೆಂಡಾವನ್ನು ತೋರಿಸಲು ಮಾತ್ರ ಇಂತಹ ಆರೋಪಗಳನ್ನು ಮಾಡುತ್ತಾರೆ. ಇಂತಹವರನ್ನು ನಿಭಾಯಿಸಲು ಬೇರು ಮಾರ್ಗಗಳಿಲ್ಲ ಮೊದಲು ಅವರನ್ನು ಗಲ್ಲಿಗೇರಿಸಬೇಕು ಇಲ್ಲದಿದ್ದರೆ ಗುಂಡಿಟ್ಟು ಹತ್ಯೆ ಮಾಡಬೇಕು ಎಂದು ಹಿಂದೂ ಮಹಾಸಭಾದ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮಾ ಹೇಳಿದ್ದಾರೆ. 
ಹಿಂದೂ ಧರ್ಮದ ವಿರುದ್ಧ ಪಕ್ಷಪಾತ ಮಾಡುವವರಿಗೆ ಬದುಕುವ ಯಾವುದೇ ಹಕ್ಕನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಇದರ ಜತೆಗೆ ಕಮಲ್ ಹಾಸನ್ ಹಾಗೂ ಅವರ ಕುಟುಂಬಸ್ಥರ ಚಿತ್ರಗಳನ್ನು ಬಹಿಷ್ಕಾರಿಸಬೇಕು ಎಂದು ಹೇಳಿದ್ದಾರೆ. 
ನವೆಂಬರ್ 7ರಂದು ಕಮಲ್ ಹಾಸನ್ ಅವರ ಹುಟ್ಟುಹಬ್ಬವಾಗಿದ್ದು ಅಂದೇ ತಮ್ಮ ರಾಜಕೀಯ ಬದುಕಿನ ಬಗ್ಗೆ ಘೋಷಿಸಲಿದ್ದಾರೆ. ಆದರೆ ಇಲ್ಲಿಯವರೆಗೂ ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬ ಮಾಹಿತಿ ಇಲ್ಲ. ಸದ್ಯ ರಾಜಕೀಯ ಎಂಟ್ರಿಗಾಗಿ ನೋಡುತ್ತಿರುವ ಕಮಲ್ ಹಾಸನ್ ಅವರ ಹಿಂದೂ ಭಯೋತ್ಪಾದನೆ ಹೇಳಿಕೆ ಇದೀಗ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತುಳು ಭಾಷೆಗೆ ಸಿಕ್ತು ಅಧಿಕೃತ ಸ್ಥಾನಮಾನ: ಕರ್ನಾಟಕದ 2ನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ, ಕರಾವಳಿಗೆ ಹೊಸ ಟೂರಿಸಂ ನೀತಿ!

‘ಪ್ರಜಾಪ್ರಭುತ್ವದ ಕರಾಳ ದಿನ’, 'ತಲೆ ಬಾಗಲ್ಲ, ಯಾರಿಗೂ ಶರಣಾಗಲ್ಲ'; ಮಮತಾ ಬ್ಯಾನರ್ಜಿ ಕೆಂಡಾಮಂಡಲ

ಪ್ರಧಾನಿ ಮೋದಿಗೆ UAE ಅಧ್ಯಕ್ಷ ನಹ್ಯಾನ್ ದೂರವಾಣಿ ಕರೆ: ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆ, ಕಾರ್ಯತಂತ್ರದ ಪಾಲುದಾರಿಕೆ ಕುರಿತು ಚರ್ಚೆ!

ದೀದಿ ಬಣಕ್ಕೆ ಫುಟ್‌ಬಾಲ್, ಬಂಡಾಯಗಾರರಿಗೆ ಲಕೋಟೆ: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

ಬಾಲಿವುಡ್ ನಟಿ ಕತ್ರೀನಾ ಕೈಫ್ ಬಾಡಿ ಶೇಮಿಂಗ್: ಟ್ರೋಲ್ ಮಾಡುವವರ ವಿರುದ್ಧ ನಟಿ ರಮ್ಯಾ ಕಿಡಿ!