ಕೋಲ್ಕತಾ: 2015ರಲ್ಲಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ರಾಣಾಘಾಟ್‌ನಲ್ಲಿ ನನ್ ಮೇಲೆ ನಡೆದ ಅತ್ಯಾಚಾರ ಅತ್ಯಾಚಾರ ಪ್ರಕರಣಕ್ಕೆ ಎಂಟು ಆರೋಪಿಗಳು ದೋಷಿಗಳು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
ಮಾರ್ಚ್ 14, 2015ರಂದು ರಾಣಾಘಾಟ್ ನ ಕಾನ್ವೆಂಟ್ ಗೆ ನುಗ್ಗಿದ ಬಾಂಗ್ಲಾದೇಶದ ಎಂಟು ಜನರ ತಂಡ, 72 ವರ್ಷದ ನನ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ದರೋಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಅತ್ಯಾಚಾರ ಪ್ರಕರಣದಲ್ಲಿ ಓರ್ವ ಆರೋಪಿ ತಪ್ಪಿತಸ್ಥ ಮತ್ತು ಇತರರು ದರೋಡೆ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ.
ಘಟನೆಯ ಬಳಿಕ ನನ್ ದೆಹಲಿಗೆ ಸ್ಥಳಾಂತರಗೊಂಡಿದ್ದ ನನ್, ಆರೋಪಿಗಳು ರಾಣಾಘಾಟ್ ನಲ್ಲಿ ಬಲವಾದ ಸಂಪರ್ಕ ಹೊಂದಿರುವುದರಿಂದ ಪ್ರಕರಣವನ್ನು ರಾಣಾಘಾಟ್ ನಿಂದ ಕೋಲ್ಕತಾಗೆ ವರ್ಗಾವಣೆ ಮಾಡುವಂತೆ ಹೈಕೋರ್ಟ್ ಗೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ಕೋರ್ಟ್ ಕಳೆದ ವರ್ಷ ಮೇ ತಿಂಗಳಲ್ಲಿ ಕೋಲ್ಕತಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos