ನವದೆಹಲಿ: ದಿನನಿತ್ಯ ಬಳಕೆ ಮಾಡುವ ಸಾಮಗ್ರಿಗಳಿಗೆ ಜಿಎಸ್ ಟಿ ತೆರಿಗೆ ವ್ಯಾಪ್ತಿಯನ್ನು ಕಡಿಮೆ ಮಾಡಿರುವ ಜಿಎಸ್ ಟಿ ಮಂಡಳಿ ಸಭೆಯ ತೀರ್ಮಾನಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಹಣಾಕಾಸು ಸಚಿವ ಪಿ ಚಿದಂಬರಂ, ’ಗುಜರಾತ್ ಗೆ ಧನ್ಯವಾದ’ ತಿಳಿಸಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಎಸ್ ಟಿ ತೆರಿಗೆ ಸ್ಲ್ಯಾಬ್ ನ್ನು ಇಳಿಕೆ ಮಾಡಲಾಗಿದೆ ಎಂಬ ಅರ್ಥ ಬರುವ ರೀತಿಯಲ್ಲಿ ಪಿ ಚಿದಂಬರಂ ಟ್ವೀಟ್ ಮಾಡಿದ್ದು, ಧನ್ಯವಾದ ಗುಜರಾತ್ ಎಂದು ಹೇಳಿದ್ದಾರೆ.
ಗುಜರಾತ್ ಗೆ ಧನ್ಯವಾದ, ಯಾವುದನ್ನು ಸಂಸತ್ತು ಹಾಗೂ ಸಾಮಾನ್ಯ ಪ್ರಜ್ಞೆ ಮಾಡಲು ಸಾಧ್ಯವಾಗಲಿಲ್ಲವೋ ಅದನ್ನು ನಿಮ್ಮ ಚುನಾವಣೆ ಮಾಡಿದೆ ಎಂದು ಚಿದಂಬರಂ ಹೇಳಿದ್ದಾರೆ. ಸರ್ಕಾರ ತಡವಾಗಿಯಾದರೂ ಬುದ್ಧಿ ಕಲಿತಿದೆ. ಶೇ.18 ರಷ್ಟಿರಬೇಕು ಎಂದು ಕಾಂಗ್ರೆಸ್ ಹಾಗೂ ನಾನು ಹೇಳುತ್ತಿದ್ದುದ್ದನ್ನು ಸರ್ಕಾರ ಪರಿಗಣಿಸಿದೆ ಎಂದು ಚಿದಂಬರಂ ಹೇಳಿದ್ದಾರೆ.