ದೇಶ

ಫಾರುಕ್ ಅಬ್ದುಲ್ಲಾ ವಿರುದ್ಧ ದೇಶದ್ರೋಹ ಆಪಾದನೆ ಮೇಲೆ ಎಫ್ ಐಆರ್ ದಾಖಲಿಸುವಂತೆ ಬಿಹಾರ ನ್ಯಾಯಾಲಯ ಸೂಚನೆ

Raghavendra Adiga
ಬೆಟ್ಟಿಯಾ (ಬಿಹಾರ): ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷರಾದ ಫಾರೂಕ್ ಅಬ್ದುಲ್ಲಾ ಅವರ ವಿರುದ್ಧ ದೇಶದ್ರೋಹದ ಆಪಾದನೆಯ ಮೇಲೆ ಎಫ್ ಐಆರ್ ದಾಖಲಿಸುವಂತೆ ಬಿಹಾರದ ನ್ಯಾಯಾಲಯವೊಂದು ಆದೇಶ ನೀಡಿದೆ.
ಪಿಓಕೆ (ಪಾಕಿಸ್ತಾನದ ಆಕ್ರಮಿತ ಕಾಶ್ಮೀರ) ಕುರಿತಂತೆ ಅಬ್ದುಲ್ಲಾ ಅವರ ಹೇಳಿಕೆಗಳನ್ನು ವಕೀಲರು ನ್ಯಾಯಲಯದ ಗಮನಕ್ಕೆ ತಂದ ನಂತರ ನ್ಯಾಯಾಲಯ ಈ ಮೇಲಿನಂತೆ ಆದೇಶವನ್ನು ನೀಡಿತು.
ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್ ಸಿ)  ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಶನಿವಾರದಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಅಥವಾ ಪಿಓಕೆ ಪಾಕಿಸ್ತಾನಕ್ಕೆ ಸೇರಿದ ಪ್ರದೇಶವಾಗಿದೆ,   ಈ ಸಂಬಂಧ ಎಷ್ಟು ಯುದ್ಧಗಳು ಸಂಭವಿಸಿದೆ ಎನ್ನುವುದು ಮುಖ್ಯವಲ್ಲ ಎಂದು ಹೇಳಿದ್ದರು.
ಇದಾಗ್ಯೂ ಭಾರತದ ಅವಿಭಾಜ್ಯ ಅಂಗವಾದ ಪಿಓಕೆ ಯನ್ನು 1947 ರಲ್ಲಿ ಪಾಕಿಸ್ತಾನ ಆಕ್ರಮಿಸಿಕೊಂಡಿದೆ ಎಂದು ಬಾರತ ವಾದಿಸುತ್ತಾ ಬಂದಿದೆ ಇದೇ ಅಲ್ಲದೆ "ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಭಾರತದ ನೆಲವನ್ನು ಬಿಟ್ಟುಕೊದಬೇಕು, ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಎಲ್ಲ ಪ್ರಯತ್ನಗಳನ್ನು ನಿಲ್ಲಿಸಬೇಕು" ಎಂದು ಫೆಬ್ರವರಿ 22, 1994ರಂದು ಭಾರತೀಯ ಸಂಸತ್ತು ಸರ್ವಾನುಮತದ ನಿರ್ಣಯ ಅಂಗೀಕರಿಸಿತ್ತು.
SCROLL FOR NEXT