ಗುಜರಾತ್: ಗುಜರಾತ್ ನ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ಕುರಿತು ಮತ್ತೋರ್ವ ಸಾಮಾಜಿಕ ಕಾರ್ಯಕರ್ತ ಜಿಗ್ನೇಶ್ ಮೇವಾನಿ ಪ್ರತಿಕ್ರಿಯೆ ನೀಡಿದ್ದು, ಹಾರ್ದಿಕ್ ಪಟೇಲ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಸೆಕ್ಸ್ ಮನುಷ್ಯನ ಮೂಲಭೂತವಾದ ಅಂಶ ಹಾಗೂ ಹಕ್ಕು. ಆದ್ದರಿಂದ ಹಾರ್ದಿಕ್ ಪಟೇಲ್ ತಪ್ಪನ್ನು ಮಾಡಿಲ್ಲ ಎಂದು ಜಿಗ್ನೇಶ್ ಮೇವಾನಿ ಹೇಳಿದ್ದಾರೆ. ಸೆಕ್ಸ್ ಸಿಡಿ ಬಗ್ಗೆ ಟ್ವೀಟ್ ಮಾಡಿರುವ ಜಿಗ್ನೇಶ್ ಮೇವಾನಿ, "ಹಾರ್ದಿಕ್ ಪಟೇಲ್, ಚಿಂತಿಸಬೇಡಿ, ನಿಮ್ಮೊಂದಿಗೆ ನಾನಿದ್ದೇನೆ, ಲೈಂಗಿಕತೆ ಮನುಷ್ಯನ ಮೂಲಭೂತ ಅಂಶ ಹಾಗೂ ಹಕ್ಕು. ನಿಮ್ಮ ಖಾಸಗಿತನವನ್ನು ಉಲ್ಲಂಘಿಸುವುದಕ್ಕೆ ಯಾರಿಗೂ ಹಕ್ಕಿಲ್ಲ ಎಂದು ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಹಾರ್ದಿಕ್ ಪಟೇಲ್ ಅವರದ್ದೇ ಎಂದು ಹೇಳಲಾಗುತ್ತಿರುವ ಅಶ್ಲೀಲ ವಿಡಿಯೋಗಳು ಇದೀಗ ಗುಜರಾತ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕಳೆದ ಮೇ 26ರಂದು ರೆಕಾರ್ಡ್ ಆಗಿರುವ ಈ ಸಿಡಿಯಲ್ಲಿ ಪಟೇಲ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಮಹಿಳೆಯೊಂದಿಗೆ ಬೆಡ್ ರೂಮಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದಾರೆ ಎಂದು ದೂರಲಾಗಿದೆ.
ಹೊಟೇಲ್ ರೂಂ ನಲ್ಲಿ ಹಿಡನ್ ಕ್ಯಾಮರಾ ಬಳಕೆ ಮಾಡಿ ವಿಡಿಯೋ ಚಿತ್ರೀಕರಿಸಲಾಗಿದೆ. ವಿಡಿಯೋ ಸತ್ಯತೆ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಾರ್ದಿಕ್ ಪಟೇಲ್ ತಮ್ಮ ಸ್ನೇಹಿತರೊಂದಿಗೆ ಮದ್ಯ ಸೇವನೆ ಮಾಡುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ.