ಚೀನಾ 
ದೇಶ

ಚೀನಾದಲ್ಲಿನ ಭ್ರಷ್ಟಾಚಾರ ಸೋವಿಯತ್ ಮಾದರಿಯ ಪತನಕ್ಕೆ ದಾರಿ!

ಚೀನಾ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲೇಬೇಕಿದೆ. ಇಲ್ಲವಾದರೆ ಸೋವಿಯತ್ ಮಾದರಿಯ ಪತನವನ್ನು ಎದುರಿಸಬೇಕಾಗುತ್ತದೆ ಎಂದು ದೇಶದ ಎರಡನೇ ಅತಿ ದೊಡ್ಡ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಎಚ್ಚರಿಕೆ ನೀಡಿದೆ.

ಬೀಜಿಂಗ್: ಚೀನಾ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲೇಬೇಕಿದೆ. ಇಲ್ಲವಾದರೆ ಸೋವಿಯತ್ ಮಾದರಿಯ ಪತನವನ್ನು ಎದುರಿಸಬೇಕಾಗುತ್ತದೆ ಎಂದು ದೇಶದ ಎರಡನೇ ಅತಿ ದೊಡ್ಡ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಎಚ್ಚರಿಕೆ ನೀಡಿದೆ. 
ಶಿಸ್ತು ಪರಿಶೀಲನೆಗಾಗಿ ಇರುವ ಕೇಂದ್ರ ಆಯೋಗದ ಕಾರ್ಯದರ್ಶಿ ಯಂಗ್ ಕ್ಸಿಯಾಡು, ಒಂದು ವೇಳೆ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವಲ್ಲಿ ವಿಫಲವಾದರೆ ಚೀನಾ ಸಹ ಸೋವಿಯತ್ ಮಾದರಿಯ ಪತನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಹಿಂದಿನ ಸರ್ಕಾರಗಳ ಆಡಳಿತವನ್ನು ಕಟುವಾಗಿ ಟೀಕಿಸಿರುವ ಯಂಗ್ ಕ್ಸಿಯಾಡು, ಪೀಪಲ್ಸ್ ಪಾರ್ಟಿ ಪತ್ರಿಕೆಯ ಸಂಪಾದಕೀಯದಲ್ಲಿ ಲೇಖನ ಬರೆದಿದ್ದು, ಪಕ್ಷದ ಭವಿಷ್ಯ ಹಾಗೂ ದೇಶದ ಜನತೆಯ ಭವಿಷ್ಯ ಎರಡೂ ಸೋವಿಯತ್ ಮಾದರಿಯ ಪತನದ ಹಾದಿಯಲ್ಲೇ ಸಾಗಲಿದೆ ಎಂದು ಹೇಳಿದ್ದಾರೆ. 
ಚೀನಾದ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಈ ಹಿಂದಿನವರಂತೆಯೇ ನಿಯಂತ್ರವಣವನ್ನು ಸಡಿಲಗೊಳಿಸಿದರೆ ದೇಶ ತುಂಡಾಗಲಿದೆ ಎಂಬ ನಂಬಿಕೆಯಲ್ಲೇ ಮುಂದುವರೆಯುತ್ತಿದ್ದಾರೆ ಎಂದು ಯಂಗ್ ಕ್ಸಿಯಾಡು ಅಭಿಪ್ರಾಯಪಟ್ಟಿದ್ದಾರೆ.  ಕ್ಸೀ ಜಿನ್ಪಿಂಗ್ ಅವರು ಭ್ರಷ್ಟಾಚಾರದ ವಿರುದ್ಧ ಕೈಗೊಂಡಿರುವ ಹೋರಾಟ ಪಕ್ಷದ ರಾಜಕೀಯ ವ್ಯಸ್ಥೆಯನ್ನೂ ಸಂಪೂರ್ಣವಾಗಿ ಶುದ್ಧಗೊಳಿಸಬೇಕಿದೆ ಎಂದು ಚೀನಾದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ