ದೇಶ

ಗುಜರಾತ್ ಜನತೆ 22 ವರ್ಷದ ಅಭಿವೃದ್ಧಿಯ ಸಿಡಿ ನೋಡಲು ಬಯಸುತ್ತಿದ್ದಾರೆ, ನನ್ನ ಸಿಡಿ ಅಲ್ಲ: ಹಾರ್ದಿಕ್ ಪಟೇಲ್

Manjula VN
ನವದೆಹಲಿ: ಗುಜಾರಾತ್ ಜನತೆ ರಾಜ್ಯ 22 ವರ್ಷದ ಅಭಿವೃದ್ಧಿಯ ಸಿಡಿಯನ್ನು ಬಯಸುತ್ತಿದ್ದಾರೆಂಯೇ ವಿನಃ 22 ವರ್ಷದ ಯುವಕನ ಸಿಡಿಯನ್ನು ಅಲ್ಲ ಎಂದು ಪಾಟೀದಾರ್ ಮೀಸಲು ಹೋರಾಟಗಾರ ಹಾರ್ದಿಕ್ ಪಟೇಲ್ ಬುಧವಾರ ಹೇಳಿದ್ದಾರೆ. 
ಸೆಕ್ಸ್ ಸಿಡಿ ವಿವಾದ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಗುಜರಾತ್ ಜನತೆ ರಾಜ್ಯದ 22 ವರ್ಷಗಳ ಅಭಿವೃದ್ಧಿ ಕುರಿತ ಸಿಡಿಯನ್ನು ನೋಡಲು ಇಚ್ಛಿಸುತ್ತಿದ್ದಾರೆಯೇ ವಿನಃ 22 ವರ್ಷದ ಯುವಕನ ಸಿಡಿಯನ್ನಲ್ಲ ಎಂದು ಹೇಳಿಕೊಂಡಿದ್ದಾರೆ.
ಹಾರ್ದಿಕ್ ಪಟೇಲ್ ಅವರದ್ದು ಎನ್ನುವ ರಾಸಲೀಲೆ ಸಿಡಿಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 
ಪ್ರಕರಣ ಸಂಬಂಧ ಬಿಜೆಪಿ ವಿರುದ್ಧ ಈ ಹಿಂದೆ ಕಿಡಿಕಾರಿದ್ದ ಹಾರ್ದಿಕ್, ತಮ್ಮ ವರ್ಚಸ್ಸಿಗೆ ಧಕ್ಕೆಯುಂಟು ಮಾಡಲು ಈ ರೀತಿ ಮಾಡಲಾಗಿದೆ. ತಮ್ಮ ಖಾಸಗಿತನಕ್ಕೆ ಬಿಜೆಪಿ ಧಕ್ಕೆಯನ್ನು ತಂದಿದೆ ಎಂದು ಹೇಳಿದ್ದರು. 
ಬಿಜೆಪಿಗೆ ಮತ್ತೊಬ್ಬರ ಖಾಸಗಿ ಬದುಕಿನಲ್ಲಿ ಇಟುಕಿ ನೋಡುವುದು ಎಂದರೆ ಬಹಳ ಇಷ್ಟದ ಕೆಲ. ಅವರ 22 ವರ್ಷದ ಅಭಿವೃದ್ಧಿ ಪ್ರಕರಣ ಬೆಳಗಿಗೆ ಬಂದಾಗ 23 ವರ್ಷದ ಯುವಕನ ಜೀವನದ ಖಾಸಗಿತನ ಬದುಕನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ನನ್ನ ವಕೀಲನ್ನುಭೇಟಿ ಮಾಡಿ ಸಿಡಿ ಹಿಂದಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವೆ.
ಸಿಡಿ ಬಿಡುಗಡೆಯಿಂದ ಪಾಟೀದಾರ್ ಸಮುದಾಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ನನ್ನ ಆಗ್ರಹ ಹಾಗೂ ಪ್ರತಿಭಟನೆಗಳನ್ನು ನಾನು ಮುಂದುವರೆಸುತ್ತೇನೆ. 23 ವರ್ಷದ ಹಾರ್ದಿಕ್ ಪಟೇಲ್ ಬೆಳೆಯುತ್ತಿದ್ದು, ನನ್ನ ವರ್ಚಸ್ಸಿಗೆ ಧಕ್ಕೆ ತರಲು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಲಾಗುತ್ತಿದೆ. ನನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇನೆ.
ಬಿಜೆಪಿಯವರು ನನ್ನ ವಿರುದ್ಧ ಮತ್ತಷ್ಟು ತಿರುಚಿದ ವಿಡಿಯೋಗಳನ್ನು ಬಿಡುಗೊಳಿಸಲು. ಇದರಿಂದ ನಾನು ಹಿಂದಕ್ಕೆ ಸರಿಯುವುದಿಲ್ಲ. ಕೀಳು ಮಟ್ಟದ ರಾಜಕೀಯದ ಆರಂಭ ಇದಾಗಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತಷ್ಟು ಸಿಡಿಗಳನ್ನು ಬಿಡುಗಡೆ ಮಾಡುತ್ತದೆ ಎಂಬುದು ನನಗೆ ತಿಳಿದಿದೆ. ಬಿಜೆಪಿಯವರ ತಂತ್ರಗಳಿಗೆ ನಾನು ಹೆದರುವುದಿಲ್ಲ. ಪ್ರಸ್ತುತ ಬಿಡುಗಡೆಯಾಗಿರುವ ಸಿಡಿಗಳಲ್ಲಿ ತಿರುಚಿದ ವಿಡಿಯೋಗಳಿದ್ದು, ಈ ಬಗ್ಗೆ ಮುಂದಿನಗಳಲ್ಲಿ ನಾನು ಸಾಕ್ಷ್ಯಾಧಾರಗಳನ್ನು ಒದಗಿಸಿ ನಾನು ಮುಗ್ದ ಎಂಬುದನ್ನು ಸಾಬೀತು ಪಡಿಸುತ್ತೇನೆಂದು ಹೇಳಿದ್ದರು. 
SCROLL FOR NEXT