ದೇಶ

ಗುಜರಾತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ನಂತರ ಪ್ರತಿಭಟನೆ, ರಾಜೀನಾಮೆ ಪ್ರಹಸನ

Srinivas Rao BV
ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ 70 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಪ್ರತಿಭಟನೆ, ರಾಜೀನಾಮೆ ಪ್ರಹಸನ ಪ್ರಾರಂಭವಾಗಿದೆ. 
ಪಕ್ಷದ ಹಿರಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಐ.ಕೆ ಜಡೇಜಾ ಅವರಿಗೆ ವಾಧ್ವಾನ್ ಕ್ಷೇತ್ರದಿಂದ ಟಿಕೆಟ್ ನೀಡದೇ ಇರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಐ.ಕೆ ಜಡೇಜಾ ಪಕ್ಷದ ಹಿರಿಯ ಮುಖಂಡರಾಗಿದ್ದು, ವಾಧ್ವಾನ್, ಧರಂಗಧ್ರ, ಸೌರಾಷ್ಟ್ರದ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದಾರೆ. 
ಕೈಗಾರಿಕೋದ್ಯಮಿ ಧನ್ ಜೀ ಪಟೇಲ್ ಅವರನ್ನು ವಾಧ್ವಾನ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಲಾಗಿದ್ದು, ಹಾರ್ದಿಕ್ ಪಟೇಲ್ ಅವರು ಪ್ರತಿನಿಧಿಸುವ ಉಪಜಾತಿಯನ್ನೇ ಪ್ರತಿನಿಧಿಸುತ್ತಿದ್ದಾರೆ. ವಾಧ್ವಾನ್ ಕ್ಷೇತ್ರದಿಂದ ಧನ್ ಜೀ ಪಟೇಲ್ ಗೆ ಟಿಕೆಟ್ ನೀಡುವ ಮೂಲಕ ಹಾರ್ದಿಕ್ ಪಟೇಲ್ ಅವರಿಗಿರುವ ಬೆಂಬಲವನ್ನು ಕಡಿಮೆ ಮಾಡಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸಿದೆ. 
ವಾಧ್ವಾನ್ ಕ್ಷೇತ್ರದಿಂದ ನನ್ನನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕೆಂದು ನನ್ನ ಬೆಂಬಲಿಗರು ಒತ್ತಾಯಿಸಿದ್ದರು, ಆದರೆ ಅದೇ ಕ್ಷೇತ್ರದಿಂದ ಹೊರಗಿನವರಿಗೆ ಟಿಕೆಟ್ ನೀಡಿರುವುದು ಪಕ್ಷದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಮಾಧ್ಯಮಗಳಿಗೆ ಐ.ಕೆ ಜಡೇಜಾ ಹೇಳಿದ್ದಾರೆ.
SCROLL FOR NEXT