ದೇಶ

ಮೌಲ್ಯಮಾಪನ ಎಡವಟ್ಟು: ಎಸ್ಎಸ್'ಎಲ್'ಸಿ ಫೇಲಾಗಿದ್ದ ಬಾಲಕ ಆರ್'ಟಿಐ ಅರ್ಜಿಯಲ್ಲಿ ಪಾಸ್

Manjula VN
ಪಾಟ್ನ: ಪರೀಕ್ಷಾ ಮೌಲ್ಯಮಾಪನ ಎಡವಟ್ಟುಗಳು ಒಮ್ಮೊಮ್ಮೆ ಎಂತಹ ಪರಿಸ್ಥಿತಿ ತಂದೊಡ್ಡುತ್ತದೆ ಎನ್ನುವುದಕ್ಕೆ ಬಿಹಾರ ರಾಜ್ಯದಲ್ಲೊಂದು ತಾಜಾ ಉದಾಹರಣೆ ಸಿಕ್ಕಿದೆ. 
ಎಸ್ಎಸ್ಎಲ್'ಸಿಯಲ್ಲಿ ಹಿಂದಿ ಪರೀಕ್ಷೆಯಲ್ಲಿ ಕೇವಲ ಹಿಂದಿಯಲ್ಲಿ 2 ಅಂಕಗಳಿಸಿ ಆಘಾತಕ್ಕೆ ಒಳಗಾಗಿದ್ದ ವಿದ್ಯಾರ್ಥಿಯೊಬ್ಬ, 79 ಅಂಕದೊಂದಿಗೆ ಉನ್ನತ ದರ್ಜೆಯಲ್ಲಿ ಉತ್ತೀರ್ಣವಾಗಿರುವ ವಿಷಯ ಬೆಳಕಿಗೆ ಬಂದಿದೆ. 
ಧನಂಜಯ್ ಕುಮಾರ್ ಎಂಬ ಬಾಲಕನಿಗೆ ಐಐಟಿಯಲ್ಲಿ ಓದುವ ಆಸೆ ಇತ್ತು. ಆದರೆ, 10ನೇ ಕ್ಲಾಸ್ ನಪಾಸಾಗಿದ್ದಕ್ಕೆ ಅಘಾತಕ್ಕೆ ಒಳಗಾಗಿದ್ದ ಆತ ಆರ್'ಟಿಐನಡಿ ಮಾಹಿತಿ ಕೋರಿದ್ದ. ಇದಕ್ಕೆ ಬಿಹಾರ ಪರೀಕ್ಷಾ ಮಂಡಳಿ ಪಾಸಾಗಿದ್ದಾನೆ ಎಂದು ಉತ್ತರಿಸಿದೆ. 
SCROLL FOR NEXT