ದೇಶ

ಮಧ್ಯಪ್ರದೇಶ: ಪೊಲೀಸ್ ಠಾಣೆಯಲ್ಲೇ ಡಿಜೆ ನೃತ್ಯ, ಗುಂಡಿನ ಪಾರ್ಟಿ!

Srinivas Rao BV
ಭೋಪಾಲ್: ಪೊಲೀಸ್ ಠಾಣೆಯಲ್ಲೇ ಡಿಜೆ ನೃತ್ಯ, ಗುಂಡಿನ ಪಾರ್ಟಿ ಏರ್ಪಡಿಸಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ. 
ಕರ್ವತ್ಯ ನಿರತ ಪೊಲೀಸರು ತಮ್ಮ ಕೆಲಸ ಬಿಟ್ಟು, ಗ್ರಾಮದ ಜನತೆಯೊಂದಿಗೆ ಸೇರಿ ಪೊಲೀಸ್ ಠಾಣೆಯಲ್ಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಅದೇ ಪೊಲೀಸ್ ಠಾಣೆಯ ಪೊಲೀಸ್ ಪೇದೆಯ ಎಂಗೇಜ್ಮೆಂಟ್ ಹಿನ್ನೆಲೆಯಲ್ಲಿ ಈ ಸಂಭ್ರಮಾಚರಣೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ಮತ್ತೊಂದು ಮೂಲಗಳ ಪ್ರಕಾರ ಠಾಣಾಧಿಕಾರಿ ಯೋಗೇಂದ್ರ ಪರ್ಮರ್ ಅವರ ವರ್ಗಾವಣೆ ರದ್ದುಗೊಂಡ ಹಿನ್ನೆಲೆಯಲ್ಲಿ ಈ ಸಂಭ್ರಮಾಚರಣೆ ನಡೆದಿದೆ ಎನ್ನಲಾಗುತ್ತಿದೆ. 
ಘಟನೆ ಬಗ್ಗೆ ಮಾಹಿತಿ ಪಡೆದಿರುವ ವಿದಿಶಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿನೀತ್ ಕಪೂರ್, ಘಟನೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಠಾಣಾಧಿಕಾರಿ ಯೋಗೇಂದ್ರ ಪರ್ಮರ್ ಅವರನ್ನು ಅಮಾನತುಮಾಡಲಾಗಿದೆ. 
SCROLL FOR NEXT