ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕಾಶ್ಮೀರ ಸ್ವಾಯತ್ತತೆ, ರೋಹಿಂಗ್ಯನ್ನರ ಬಗ್ಗೆ ರಾಹುಲ್ ಗಾಂಧಿ ನಿಲುವು ಸ್ಪಷ್ಟಪಡಿಸಲಿ: ಅಮಿತ್ ಷಾ

ರೋಹಿಂಗ್ಯ ಮುಸ್ಲಿಮರು ಹಾಗೂ ಕಾಶ್ಮೀರ ಸ್ವಾಯತ್ತತೆ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಬಿಒಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸವಾಲು ಹಾಕಿದ್ದಾರೆ

ಅಮಿತ್ ಷಾ
Srinivas Rao BV
Updated On : 21 Nov 2017, 8:39 am
ಭವ್ನಗರ್: ರೋಹಿಂಗ್ಯ ಮುಸ್ಲಿಮರು ಹಾಗೂ ಕಾಶ್ಮೀರ ಸ್ವಾಯತ್ತತೆ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಬಿಒಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸವಾಲು ಹಾಕಿದ್ದಾರೆ. 
ಗುಜರಾತ್ ನಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅಮಿತ್ ಷಾ, ಕಾಶ್ಮೀರ ಸಮಸ್ಯೆ ಉದ್ಭವಿಸಿದ್ದು ಯಾವ ಪಕ್ಷದ ಅಧಿಕಾರಾವಧಿಯಲ್ಲಿ ಎಂಬುದನ್ನು ಕಾಂಗ್ರೆಸ್ ಹೇಳಬೇಕು ಎಂದಿದ್ದಾರೆ.  ಕಾಂಗ್ರೆಸ್ ನ ಅವಧಿಯಲ್ಲೇ ಭಯೋತ್ಪಾದಕರು ನಿರ್ಭಯದಿಂದ ಜನತೆಯನ್ನು ಹತ್ಯೆ ಮಾಡಿದ್ದರು ಎಂದು ಅಮಿತ್ ಷಾ ಆರೋಪಿಸಿದ್ದು, ಬಿಜೆಪಿ ಸರ್ಕಾರ ಭಯೋತ್ಪಾದಕರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ಹೇಳಿದ್ದಾರೆ. 
ಇದೇ ವೇಳೆ ಕಾಶ್ಮೀರಕ್ಕೆ ಸ್ವಾಯತ್ತತೆ ನೀಡುವ ಕುರಿತು ಪಿ.ಚಿದಂಬರಂ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಅಮಿತ್ ಷಾ, ನರೇಂದ್ರ ಮೋದಿ ಸರ್ಕಾರ ಕಾಶ್ಮೀರದಲ್ಲಿನ ಪರಿಸ್ಥಿತಿ ಸುಧಾರಣೆ ಮಾಡಲು ಯತ್ನಿಸುತ್ತಿದೆ. ಆದರೆ ಚಿದಂಬರಂ ಗುಜರಾತ್ ಗೆ ಬಂದು ಕಾಶ್ಮೀರಕ್ಕೆ ಸ್ವಾಯತ್ತತೆ ನೀಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಕಾಶ್ಮೀರದ ಸ್ವಾಯತ್ತತೆ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಅಮಿತ್ ಷಾ ಹೇಳಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement