ನವದೆಹಲಿ: 4 ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿದ್ದು, ಈ ಹಿನ್ನಲೆಯಲ್ಲಿ ಸಹಪಾಠಿಯಾಗಿರುವ ಬಾಲಕನ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ಗುರುವಾರ ತಿಳಿದುಬಂದಿದೆ.
ರಾಜಧಾನಿ ದೆಹಲಿಯ ದ್ವಾರಕಾದಲ್ಲಿರುವ ಮ್ಯಾಕ್ಸ್'ಫೋರ್ಟ್ ಶಾಲೆಯಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಕಳೆದ ಶುಕ್ರವಾರದಂದು ಶಾಲೆಯಿಂದ ಮನೆಗೆ ಬಂದ ಮಗಳು ಹೊಟ್ಟೆ ಹಾಗೂ ಖಾಸಗಿ ಭಾಗಗಳಲ್ಲಿ ಅತೀವ ನೋವು ಎಂದು ಅಳಲು ಆರಂಭಿಸಿದ್ದಾರೆ. ಬಳಿಕ ಅದನ್ನು ನಾನು ನಿರ್ಲಕ್ಷಿಸಿದ್ದೆ. ಬಳಿಕ ಶಾಲೆಯಲ್ಲಿ ತನ್ನ ಮೇಲೆ ನಡೆದ ದೌರ್ಜನ್ಯದ ಕುರಿತಂತೆ ಬಾಲಕಿ ಎಳೆಎಳೆಯಾಗಿ ಬಿಚ್ಚಿಟ್ಟಳು ಎಂದು ಬಾಲಕಿಯ ತಾಯಿ ಹೇಳಿಕೊಂಡಿದ್ದಾರೆ.
ಮರುದಿನ ಬಾಲಕಿಯನ್ನು ರಾಕ್ಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ಪೋಷಕರು ಬಾಲಕಿಗೆ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ವೈದ್ಯರು ಬಾಲಕಿಗೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಿದ್ದಾರೆ. ಕೂಡಲ ಪೋಷಕರು ದ್ವಾರಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ಶಾಲಾ ಶಿಕ್ಷಕರು ಹಾಗೂ ಶಾಲಾ ನಿರ್ವಾಹಕರಿಗೆ ಮಾಹಿತಿ ನೀಡಿದ್ದೆವು. ಈ ವೇಳೆ ತಿಳಿಯದೆ ಆಗಿದ್ದು ನಿರ್ಲಕ್ಷಿಸುವಂತೆ ತಿಳಿಸಿದರು. ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಶಾಲಾ ಪ್ರಾಂಶುಪಾಲರೂ ಕೂಡ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ. ಆರೋಪಿ ಬಾಲಕನ ಕುರಿತ ಮಾಹಿತಿ ನೀಡುವುದಕ್ಕೂ ಅವರು ನಿರಾಕರಿಸಿದ್ದರು ಎಂದು ಬಾಲಕಿಯ ಪೋಷಕರು ಹೇಳಿದ್ದಾರೆ.