ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಎಐಎಡಿಎಂಕೆ ಬಣ ರಾಜಕೀಯ ತಾರ್ಕಿಕ ಅಂತ್ಯ ಕಂಡಿದ್ದು, ಸಿಎಂ ಪಳನಿಸ್ವಾಮಿ, ಪನ್ನೀರ್ ಸೆಲ್ವಂ ಬಣ ಎಐಎಡಿಎಂಕೆ ಪಕ್ಷದ ಎರಡೆಲೆ ಚಿನ್ಹೆಯನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದ್ದು, ಸಿಎಂ ಪಳನಿಸ್ವಾಮಿ, ಪನ್ನೀರ್ ಸೆಲ್ವಂ ಬಣಕ್ಕೆ ಎಐಎಡಿಎಂಕೆ ಪಕ್ಷದ ಎರಡೆಲೆ ಚಿನ್ಹೆಯನ್ನು ನೀಡಲಾಗಿದೆ ಎಂದು ವರದಿ ಮಾಡಿದೆ. ಆದರೆ ಈ ಬಗ್ಗೆ ಚುನಾವಣಾ ಆಯೋಗದ ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡಿಲ್ಲ.
ಎರಡೆಲೆ ಚಿನ್ಹೆಗಾಗಿ ಹೋರಾಟ ನಡೆಸಿದ್ದ ವಿಕೆ ಶಶಿಕಲಾ ಮತ್ತು ಟಿಟಿವಿ ದಿನಕರನ್ ಅವರಿಗೆ ಭಾರಿ ಮುಜುಗರವಾಗಿದ್ದು, ಈ ಹಿಂದೆ ಜಯಾ ನಿಧನದ ಬಳಿಕ ಅವರ ಆರ್ ಕೆ ನಗರ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆ ಸಂದರ್ಭದಲ್ಲಿ ಶಶಿಕಲಾ ಬಣ ಹಾಗೂ ಪಳನಿಸ್ವಾಮಿ ಬಣ ಕಚ್ಚಾಡಿತ್ತು.
ಅಲ್ಲದೆ ಎರಡೆಲೆ ಚಿನ್ಹೆಗಾಗಿ ದಿನಕರನ್ ಚುನಾವಣಾ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಕುರಿತ ಅರ್ಜಿ ಕೂಡ ಇನ್ನು ವಿಚಾರಣೆ ಹಂತದಲ್ಲಿದ್ದು, ಇದೀಗ ಆಯೋಗದ ನಿರ್ಧಾರ ಪಳನಿಸ್ವಾಮಿ ಬಣಕ್ಕೆ ಬಲ ನೀಡಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics