ನವದೆಹಲಿ: ಭಾರತವು ಮಾನವೀಯ ಸಮಸ್ಯೆಗಳನ್ನು "ರಾಜಕೀಯಗೊಳಿಸುತ್ತಿದೆ" ಎಂದು ಪಾಕಿಸ್ತಾನ ಆರೋಪಿಸಿದೆ. ಪಾಕಿಸ್ತಾನದ ನಾಗರಿಕರಿಗೆ ವೈದ್ಯಕೀಯ ವೀಸಾ ಒದಗಿಸುವ ಭಾರತದ ಕ್ರಮವನ್ನು ಟೀಕಿಸಿರುವ ಪಾಕಿಸ್ತಾನ ಇದು ಸಹಾನುಭೂತಿಯನ್ನು ತೋರಿಸುವುದಿಲ್ಲ ಬದಲಾಗಿ ಕೇವಲ ಗಿಮಿಕ್ ಆಗಿದೆ ಎಂದಿದೆ.
ವಿದೇಶಾಂಗ ವ್ಯವಹಾರ ಇಲಾಖೆ ವಕ್ತಾರ ಮೊಹಮ್ಮದ್ ಫೈಸಲ್ "ಆಯ್ದ ಪಾಕಿಸ್ತಾನಿಗಳಿಗೆ ವೈದ್ಯಕೀಯ ವೀಸಾದ ವಿತರಣೆಯ ಭಾರತದ ನೀತಿ ವಿಷಾದನೀಯವಾಗಿದೆ" ಎಂದಿದ್ದಾರೆ.
"ಭಾರತವು ಮಾನವೀಯ ಸಮಸ್ಯೆಗಳನ್ನು ರಾಜಕೀಯ ಲಾಬಕ್ಕೆ ಬಳಸಿಕೊಳ್ಳುತ್ತಿದೆ, ಇಇದರಲ್ಲಿ ಅನೇಕರು ಹೆಚ್ಚಿನ ವೆಚ್ಚ ಮಾಡಿ ಸುದೀರ್ಘ ಕಾಲದಿಂದ ಭಾರತೀಯ ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ. ಇದು ಖಂಡನೀಯ. ಇಲ್ಲಿ ಯಾರೂ ಭಾರತೀಯ ಗಿಮಿಕ್ ನಿಂದ ಮೂರ್ಖರಾಗುವುದಿಲ್ಲ.ಇದು ಸಹಾನುಭೂತಿಯ ಸಂಕೇತವಲ್ಲ, ಭಾರತ್ದ ರಾಜಕೀಯ ಮೇಲುಗೈ ಗೆ ಆಯ್ದ ವ್ಯಕ್ತಿಗಳ ನೆರವಿನೊಡನೆ ನಡೆಸುತ್ತಿರುವ ನಾಟಕ." ಫೈಸಲ್ ಹೇಳಿದರು.
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದ ಮಹಿಳೆಗೆ ಭಾರತದಲ್ಲಿ ಯಕೃತ್ತಿನ ಕಸಿ ಮಾಡಿಸಲು ವೀಸಾ ನೀಡುವಂತೆ ಇಸ್ಲಾಮಾಬಾದ್ ನ ಭಾರತೀಯ ಹೈ ಕಮೀಷನರ್ ಗೆ ಕೇಳಿದ ನಂತರ ಫೈಸಲ್ಈ ಹೇಳಿಕೆ ನೀಡಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಅನೇಕ ಗಂಭೀರ ಸಮಸ್ಯೆಗಳ ಜತೆ ಹೋರಾಡುತ್ತಿರುವ ಎರಡು ರಾಷ್ಟ್ರಗಳ ನನಡುವೆ ಸಹ ಅಲ್ಲಿನ ಪ್ರಜೆಗಳಿಗೆ ವೈದ್ಯಕೀಯ ವೀಸಾ ನೀಡುವ ಮೂಲಕ ಸ್ವರಾಜ್ ಮಾನವೀಯ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.