ಉಪನ್ಯಾಸಕಿಯನ್ನು ಅಪ್ಪಿಕೊಂಡಿರುವ ರಾಹುಲ್ ಗಾಂಧಿ 
ದೇಶ

ಗುಜರಾತ್ ನಲ್ಲಿ ರಾಹುಲ್ ಗಾಂಧಿ ಈ ಉಪನ್ಯಾಸಕಿಯನ್ನು ಅಪ್ಪಿಕೊಂಡಿದ್ದು ಯಾಕೆ ಗೊತ್ತಾ?

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಗುಜರಾತ್ ನಲ್ಲಿ ಅರೆ ಕಾಲಿಕ ಉಪನ್ಯಾಸಕಿಯೊಬ್ಬರನ್ನು ಭಾವುಕಾರಿ...

ಅಹಮದಾಬಾದ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಗುಜರಾತ್ ನಲ್ಲಿ ಅರೆ ಕಾಲಿಕ ಉಪನ್ಯಾಸಕಿಯೊಬ್ಬರನ್ನು ಭಾವುಕಾರಿ ಅಪ್ಪಿಕೊಳ್ಳುವ ಮೂಲಕ ಗುಜರಾತಿಗಳ ಮನ ಗೆದ್ದಿದ್ದಾರೆ.
1ನೇ ಹಂತದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಎರಡು ದಿನಗಳ ಗುಜರಾತ್  ಪ್ರವಾಸದಲ್ಲಿದ್ದು, ಇಲ್ಲಿನ ತಾಕೋರ್ಭಾಯಿ ದೇಸಾಯಿ ಹಾಲ್ನಲ್ಲಿ ಉಪನ್ಯಾಸಕರು, ಪ್ರಾಧ್ಯಾಪಕರು ಹಾಗೂ ಶಾಲಾ ಶಿಕ್ಷಕರನ್ನುದ್ದೇಶಿಸಿ ಭಾಷಣ ಮಾಡಿದರು. 
ಶಿಕ್ಷಕರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ ಅವರು ಶಿಕ್ಷಕರು ಬದುಕಿನಲ್ಲಿ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ತಿಳಿದುಕೊಂಡು ಮೌನವಾಗಿ ತಮ್ಮ ನೋವನ್ನು ವ್ಯಕ್ತಪಡಿಸಿದರು.
ನಿವೃತ್ತಿಗೆ ದಿನಗಳನ್ನು ಎಣಿಸುತ್ತಿರುವ ರಂಜನಾ ಅವಸ್ಥಿ ಎಂಬ ಉಪನ್ಯಾಸಕಿ, ರಾಹುಲ್ ಗಾಂಧಿ ಪ್ರಶ್ನೆ ಕೇಳುತ್ತಲೇ ತಮ್ಮ ಪರಿಸ್ಥಿತಿಯನ್ನು ನಿವೇದಿಸಿಕೊಂಡರು. ನಾನು 1994ರಲ್ಲಿ ಸಂಸ್ಕೃತದಲ್ಲಿ ಪಿಹೆಚ್ಡಿ ಮುಗಿಸಿದ್ದೇನೆ. 22 ವರ್ಷಗಳಿಂದ ಅರೆಕಾಲಿಕ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಸಂಬಳ ಈಗಲೂ ಕೇವಲ 12 ಸಾವಿರ ರುಪಾಯಿ ಇದೆ. ಇಂತಹ ದಯನೀಯ ಸ್ಥಿತಿಯಲ್ಲಿ ಬದುಕು ದೂಡುತ್ತಿರುವ ತಮಗೆ ಆಸರೆ ಏನೂ ಇಲ್ಲ ಎಂದು ರಂಜನಾ ತಮ್ಮ ಮನದಾಳವನ್ನು ಬಿಚ್ಚಿಟ್ಟರು.
ಗುಜರಾತ್ ನಲ್ಲಿ ಅರೆಕಾಲಿಕ ಉಪನ್ಯಾಸಕರ ಸ್ಥಿತಿ ದಯನೀಯವಾಗಿದೆ. ಸಮರ್ಪಕ ಸೌಕರ್ಯಗಳೇನೂ ಅವರಿಗೆ ಇಲ್ಲ. ಸಂಬಳ, ವೈದ್ಯಕೀಯ ವ್ಯವಸ್ಥೆ, ಪಿಂಚಣಿ ಸೇರಿ ಮೂಲ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ ಎಂದು ರಂಜನಾ ಕಣ್ಣಲ್ಲಿ ನೀರು ತುಂಬಿಕೊಂಡಿದ್ದನ್ನು ನೋಡಿ ರಾಹುಲ್ ಗಾಂಧಿ ಕೂಡ ಕಣ್ಣೀರಾದರು.
ತಕ್ಷಣವೇ ಜನರ ಮಧ್ಯೆಯಿದ್ದ ರಂಜನಾ ಬಳಿಗೆ ಧಾವಿಸಿದ ರಾಹುಲ್, ರಂಜನಾ ಅವರನ್ನು ತಮ್ಮ ತಾಯಿಯಂತೆ ಅಪ್ಪಿಕೊಂಡು ಧೈರ್ಯ ತುಂಬಿದರು. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸದೃಢವಾದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಜಾರಿಗೊಳ್ಳಲಿದೆ. ಸಂಕಷ್ಟದಲ್ಲಿರುವವರ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸಲಾಗುತ್ತದೆ ಎಂದು ರಾಹುಲ್ ಭರವಸೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT