ವಿಶ್ವಸುಂದರಿ ಮಾನುಷಿ ಚಿಲ್ಲರ್ 
ದೇಶ

ಪದ್ಮಾವತಿ ವಿವಾದ: ನಮ್ಮದು ಮಹಿಳಾ ಸ್ನೇಹಿ ಸಮಾಜವಲ್ಲ- ವಿಶ್ವ ಸುಂದರಿ ಮಾನುಷಿ ಚಿಲ್ಲರ್

ಕಾನೂನು ಕ್ರಮ, ವಿಚಾರಣೆಗಳ ಕುರಿತಂತೆ ಭಾರತೀಯ ಮಹಿಳೆಯರು ತಲೆಕೆಡಿಸಿಕೊಳ್ಳಬಾರದು. ನಮ್ಮ ಸಮಾಜ ಮಹಿಳಾ ಸ್ನೇಹಿಯಲ್ಲ ಎಂಬ ಭಾವನೆಗಳಿದ್ದರೂ ಸವಾಲುಗಳನ್ನು ಎದುರಿಸಬೇಕು ಎಂದು ವಿಶ್ವಸುಂದರಿ ಮಾನುಷಿ ಚಿಲ್ಲರ್ ಅವರು ಸೋಮವಾರ ಹೇಳಿದ್ದಾರೆ...

ಮುಂಬೈ: ಕಾನೂನು ಕ್ರಮ, ವಿಚಾರಣೆಗಳ ಕುರಿತಂತೆ ಭಾರತೀಯ ಮಹಿಳೆಯರು ತಲೆಕೆಡಿಸಿಕೊಳ್ಳಬಾರದು. ನಮ್ಮ ಸಮಾಜ ಮಹಿಳಾ ಸ್ನೇಹಿಯಲ್ಲ ಎಂಬ ಭಾವನೆಗಳಿದ್ದರೂ ಸವಾಲುಗಳನ್ನು ಎದುರಿಸಬೇಕು ಎಂದು ವಿಶ್ವಸುಂದರಿ ಮಾನುಷಿ ಚಿಲ್ಲರ್ ಅವರು ಸೋಮವಾರ ಹೇಳಿದ್ದಾರೆ. 
ವಾಣಿಜ್ಯ ನಗರಿ ಮುಂಬೈ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ಅವರು, ಪದ್ಮಾವತಿ ಚಿತ್ರ ವಿವಾದ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ಭಾರತೀಯ ಮಹಿಳೆಯರು ತಮ್ಮ ಬಗ್ಗೆ ವಿಶ್ವಾಸವನ್ನು ಹೆಚ್ಚಿಸಿಕೊಂಡು ಮುಂಬರುವ ಯಾವುದೇ ಸವಾಲುಗಳನ್ನಾದರೂ ಎದುರಿಸಬೇಕು ಎಂದು ಹೇಳಿದ್ದಾರೆ. 
ಜೀವನ ಹಾದಿಯಲ್ಲಿ ನಾವು ಸಾಕಷ್ಟು ನಿಯಂತ್ರಗಳನ್ನು ಎದುರಿಸುತ್ತೇವೆ. ಕೆಲವೊಮ್ಮ ನಮ್ಮದು ಮಹಿಳಾ ಸ್ನೇಹಿ ಸಮಾಜವಲ್ಲ ಎಂಬ ಭಾವನೆಗಳು ಹುಟ್ಟುತ್ತವೆ. ಒಬ್ಬ ವ್ಯಕ್ತಿಯಾಗಿ ನಾವು ಉದಾಹರಣೆಯಾಗಬೇಕು. ವಿಶ್ವಾಸವನ್ನು ಹೆಚ್ಚಿಸಿಕೊಂಡು ಜೀವನ ಹಾದಿಯಲ್ಲಿ ಸಾಗಬೇಕು, ಸಾಧನೆಗಳನನ್ನು ಮಾಡಬೇಕು. 
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಅಭ್ಯರ್ಥಿಯಾಗಿ ನಾವು ವಿವಿಧ ದೇಶಗಳಲ್ಲಿ ನೃತ್ಯಗಳನ್ನು ಮಾಡಬೇಕಾಗುತ್ತದೆ. ಮಾನುಷಿ ಚಿಲ್ಲರ್ ಅವರು ಸಂಜಯ್ ಲೀಲಾ ಬನ್ಸಾಲಿಯವರ ಗೋಲಿಯೋಂಕಿ ರಾಸ್'ಲೀಲಾ ರಾಮ್ ಲೀಲಾ ಚಿತ್ರದ ಡೋಲ್ ಬಾಜೆ ಹಾಡಿಗೆ ನೃತ್ಯ ಮಾಡಿದ್ದರು. 
ಪೂರ್ವಭ್ಯಾಸದ ಸಂದರ್ಭದಲ್ಲಿ ಸಾಕಷ್ಟು ಯುವತಿಯರು ಈ ಹಾಡಿಗೆ ನತ್ಯ ಮಾಡಿದ್ದರು. ಇದು ನನಗೆ ಬಹಳಷ್ಟು ಸಂತಸವನ್ನು ತಂದಿತ್ತು. ವಿಶ್ವದ ಮುಂದೆ ಭಾರತವನ್ನು ತರಲು ನಾನು ಕೆಲಸ ಮಾಡುತ್ತೇನೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!