ಛತ್ತೀಸ್ ಗಢ ಮುಖ್ಯಮಂತ್ರಿ ರಮಣ್ ಸಿಂಗ್ 
ದೇಶ

ಒಂದೇ ಸಂಖ್ಯೆಯ 19 ಪಜೆರೊ ಎಸ್ ಯುವಿ ಕಾರು ಖರೀದಿಸಿದ ಛತ್ತೀಸ್ ಗಢ ಸಿಎಂ ರಮಣ್ ಸಿಂಗ್

ಮೂಢನಂಬಿಕೆಗೆ ಇದು ಸ್ಪಷ್ಟ ನಿದರ್ಶನ ಎನ್ನಬಹುದೇನೋ, ಛತ್ತೀಸ್ ಗಢದ ...

ನವದೆಹಲಿ: ಮೂಢನಂಬಿಕೆಗೆ ಇದು ಸ್ಪಷ್ಟ ನಿದರ್ಶನ ಎನ್ನಬಹುದೇನೋ, ಛತ್ತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಇತ್ತೀಚೆಗೆ ಮಿತ್ಸುಬಿಷಿ ಪಜೆರೊ ಎಸ್ ಯುವಿ 19 ಕಾರುಗಳನ್ನು ಖರೀದಿಸಿದ್ದರು. ಅವುಗಳ ಸಂಖ್ಯೆಗಳೆಲ್ಲವೂ 004 ಎಂದು ಕೊನೆಗೆ ಇದೆ.
ಮಾವೋವಾದಿಗಳ ಸಮಸ್ಯೆ ಹೆಚ್ಚಾಗಿರುವ ಕಾರಣ ಛತ್ತೀಸ್ ಗಢ ಮುಖ್ಯಮಂತ್ರಿ ಸ್ಟರ್ಡಿ ಎಸ್ ಯುವಿ ಕಾರುಗಳನ್ನು ಖರೀದಿಸಿದ್ದಾರೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು 19 ಸಂಖ್ಯೆ ಗೆಲುವಿನ ಸಂಕೇತವಾಗಿದ್ದು ಮೂಢನಂಬಿಕೆಯಿಂದ ಈ ಸಂಖ್ಯೆಯ ಕಾರುಗಳನ್ನು ಖರೀದಿಸಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. 
ಆದರೆ ಇದನ್ನು ನಿರಾಕರಿಸಿರುವ ಮುಖ್ಯಮಂತ್ರಿ ರಮಣ್ ಸಿಂಗ್, ಕಾರುಗಳ ನಂಬರ್ ಪ್ಲೇಟುಗಳನ್ನು ಆರ್ ಟಿಒ ಕಚೇರಿಗಳು ನಿರ್ಧರಿಸುತ್ತವೆಯೇ ಹೊರತು ನಾವಲ್ಲ. ನಮಗೆ ಸಿಕ್ಕಿರುವ ಸಂಖ್ಯೆಗಳೆಲ್ಲವು ಅದೃಷ್ಟದ ಸಂಖ್ಯೆಗಳಾಗಿವೆಯೇ ವಿನಃ ಇದರಲ್ಲಿ ಮ್ಯಾಜಿಕ್, ಮೂಢನಂಬಿಕೆಯೇನು ಇಲ್ಲ. ನಾನು ನನ್ನ ಜೀವನದಲ್ಲಿ ಮೂಢಾಚಾರಗಳನ್ನು ನಂಬುವುದಿಲ್ಲ ಎಂದರು.
2003ರಿಂದ ರಮಣ್ ಸಿಂಗ್ ಅವರು ಸತತ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್ ನ ಅಜಿತ್ ಜೋಗಿ ನಂತರ ರಮಣ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾರೆ. ಮುಂದಿನ ವರ್ಷ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT