ಮರಳುಗಾರಿಕೆ 
ದೇಶ

ರಾಜ್ಯದಲ್ಲಿ ಮರಳುಗಾರಿಕೆ ಸ್ಥಗಿತಗೊಳಿಸಿ, ಮಲೇಷಿಯಾದಿಂದ ಮರಳು ಆಮದು ಮಾಡಿಕೊಳ್ಳಿ

ಮುಂದಿನ ಆರು ತಿಂಗಳ ಒಳಗೆ ರಾಜ್ಯದಲ್ಲಿ ಮರಳುಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್‌ ಹೈ ಕೋರ್ಟ್‌ನ ಮದುರೈ ನ್ಯಾಯಪೀಠ........

ಮಧುರೈ: ಮುಂದಿನ ಆರು ತಿಂಗಳ ಒಳಗೆ ರಾಜ್ಯದಲ್ಲಿ ಮರಳುಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್‌ ಹೈ ಕೋರ್ಟ್‌ನ ಮದುರೈ ನ್ಯಾಯಪೀಠವು ಆದೇಶಿಸಿದೆ. ಇದಕ್ಕೆ ಬದಲಾಗಿ ರಾಜ್ಯಕ್ಕೆ ಅಗತ್ಯವಾದ ಮರಳನ್ನು ಮಲೇಷ್ಯಾದಿಂದ ಆಮದು ಮಾಡಿಕೊಳ್ಳುವಂತೆ ಅದು ಸೂಚಿಸಿದೆ.
ವಿದೇಶದಿಂದ ಆಮದು ಮಾಡಿಕೊಳ್ಳುವ ಮರಳಿನ ನಿರ್ವಹಣೆಗೆ ಅಗತ್ಯ ನಿಯಮಗಳನ್ನು ಸರ್ಕಾರ ರೂಪಿಸಬೇಕು. ಇದರೊಡನೆ ಅಕ್ರಮ ಮರಳುಗಾರಿಕೆ ಮತ್ತು ಮರಳಿನ ಸಾಗಣೆಯನ್ನು ತಡೆಯಲು ಚೆಕ್‌ ಪೋಸ್ಟ್‌ ಪ್ರಾರಂಭಿಸಬೇಕು ಎಂದು ನ್ಯಾಯಮೂರ್ತಿ ಆರ್‌.ಮಹದೇವನ್‌ ಸೂಚಿಸಿದರು.
ಪರಿಸರ ಸಮತೋಲನ ಕಾಪಾಡಿಕೊಳ್ಳುವ ಸಲುವಾಗಿ ಗ್ರಾನೈಟ್‌ ಹಾಗೂ ಇತರೆ ರೀತಿಯ ಗಣಿಗಾರಿಕೆಯನ್ನು ನಿರ್ದಿಷ್ಟ ಅವಧಿಯಲ್ಲಿ ಮುಚ್ಚಬೇಕು. ಹೊರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಬಹುದಾದ ಮರಳು ಹಾಗೂ ಖನಿಜಗಳನ್ನು ಗುರುತಿಸುವ ಪ್ರಕ್ರಿಯೆ ಮುಂದುವರಿಸಲು ಭೂವಿಜ್ಞಾನ ಪರಿಣಿತರ ತಂಡವನ್ನು ರಚಿಸಲು ನ್ಯಾಯಾಲಯವು ಆದೇಶಿಸಿದೆ.
ಮಲೇಷ್ಯಾದಿಂದ ಆಮದು ಮಾಡಿಕೊಂಡಿದ್ದ ಮರಳನ್ನು ಎಂ.ಆರ್‌.ಎಂ ರಾಮಯ್ಯ ಎಂಟರ್‌ ಪ್ರೈಸಸ್‌ ಲಾರಿಗಳ ಮೂಲಕ ಸಾಗಿಸುವಾಗ ತಮಿಳುನಾಡಿನ ಪೊಲೀಸರು ವಶಕ್ಕೆ ಪಡೆದು, ಅನಧಿಕೃತ ಮರಳು ಸಾಗಾಣಿಕಾ ಆರೋಪ ಹೊರಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT