ದೇಶ

ಗುಜರಾತ್: ವಿದ್ಯುತ್ ಖರೀದಿಯಲ್ಲಿ 26 ಸಾವಿರ ಕೋಟಿ ರೂ. ಅವ್ಯವಹಾರ; ಕಾಂಗ್ರೆಸ್ ಆರೋಪ

Raghavendra Adiga
ಅಹಮದಾಬಾದ್:  ಅದಾನಿ, ಇಎಸ್ ಎಸ್ ಎ ಆರ್, ಟಾಟಾ ಹಾಗೂ ಚೈನಾ ಲೈಟ್ ಸಂಸ್ಥೆಗಳಿಂದ ಗುಜರಾತ್ ಬಿಜೆಪಿ ಸರ್ಕಾರ ಹೆಚ್ಚಿನ ಬೆಲೆ ಕೊಟ್ಟು ವಿದ್ಯುತ್ ಖರೀದಿ ನಡೆಸಿದೆ. ಇದರಲ್ಲಿ 26 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
"ಬಿಜೆಪಿ ಸರ್ಕಾರದ ಉದ್ದೇಶವು ನಾಲ್ಕು ಖಾಸಗಿ ವಿದ್ಯುತ್ ಕಂಪನಿಗಳ ಪ್ರಯೋಜನಕ್ಕಾಗಿ ಇದೆ! ಜನರು ಮತ್ತು ರಾಜ್ಯದ ಖಜಾನೆಗೆ ಇದರಿಂದ ನಷ್ಟವಾದರೂ ಸರ್ಕಾರಕ್ಕೆ ಯಾವ ಬಾಧೆ ಇಲ್ಲ" ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗುಜರಾತ್ನಲ್ಲಿರುವ ನಾಲ್ಕು ಖಾಸಗಿ ಕಂಪೆನಿಗಳು ಲಾಭಕ್ಕಾಗಿ ವಿದ್ಯುತ್ ಖರೀದಿಯಲ್ಲಿ ಭಾರೀ ಹಗರಣ ನಡೆದಿರುವುದು ಆಘಾತಕಾರಿ ವಿಚಾರವಾಗಿದೆ. ಸರ್ಕಾರಿ ಸ್ವಾಮ್ಯದ ವಿದ್ಯುತ್ ಸ್ಥಾವರಗಳು 8,641 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ, ಆದರೆ "ಆ ಸ್ಥಾವರಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವುದರ ಬದಲು ಕೇವಲ ಶೇ.33 ರಿಂದ 38 ರಷ್ಟು ಮಾತ್ರವೇ ಬಳಸಿಕೊಳ್ಳುತ್ತಾರೆ. ಗುಜರಾತ್ ಸರಕಾರವು ಕೇವಲ 3,283 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ರಾಜ್ಯ ಸ್ವಾಮ್ಯದ ವಿದ್ಯುತ್ ಸ್ಥಾವರಗಳಿಂದ ಉತ್ಪಾದಿಸುತ್ತಿದೆ." ಅವರು ಹೇಳಿದರು.
"ಇದರ ಕಾರಣದಿಂದ ರಾಜ್ಯದ ನಾಲ್ಕು ಖಾಸಗಿ ವಿದ್ಯುತ್ ಉತ್ಪಾದಕ ಸಂಸ್ಥೆಗಳಿಗೆ ಲಾಭವಾಗುತ್ತಿದೆ. ಸರ್ಕಾರವು ಆ ಸಂಸ್ಥೆಗಳಿಂದ ಹೆಚ್ಚಿನ ದರಕ್ಕೆ ವಿದ್ಯುತ್ ನ್ನು ಖರೀದಿಸಿದೆ. ರಾಜ್ಯದಲ್ಲಿ ಬಿಜೆಪಿ ವಿದ್ಯುತ್ ಉತ್ಪಾದನೆ ಯನ್ನು ವ್ಯವಸ್ಥಿತವಾಗಿ ತಗ್ಗಿಸುವುದನ್ನು ಇದು ಸಾಬೀತುಪಡಿಸುತ್ತದೆ."  ಸುರ್ಜೇವಾಲ ತಿಳಿಸಿದ್ದಾರೆ.
SCROLL FOR NEXT