ಗರ್ಭಾ ನೃತ್ಯದಲ್ಲಿ ಭಾಗವಹಿಸಿದ್ದಕ್ಕೆ 21 ವರ್ಷದ ಯುವಕನಿಗೆ ಥಳಿತ, ಯುವಕ ಸಾವು! 
ದೇಶ

ಗುಜರಾತ್: ಗರ್ಭಾ ನೃತ್ಯದಲ್ಲಿ ಭಾಗವಹಿಸಿದ್ದಕ್ಕೆ 21 ವರ್ಷದ ಯುವಕನಿಗೆ ಥಳಿತ, ಯುವಕ ಸಾವು!

ಗುಜರಾತ್ ನಲ್ಲಿ ಗರ್ಭಾ ನೃತ್ಯದಲ್ಲಿ ಭಾಗವಹಿಸಿದ್ದ ಯುವಕನನ್ನು ಥಳಿಸಲಾಗಿದ್ದು, ಯುವಕ ಸಾವನ್ನಪ್ಪಿರುವ ಘಟನೆ ಆನಂದ್ ಜಿಲ್ಲೆಯಲ್ಲಿ ನಡೆದಿದೆ.

ಅಹಮದಾಬಾದ್: ಗುಜರಾತ್ ನಲ್ಲಿ ಗರ್ಭಾ ನೃತ್ಯದಲ್ಲಿ ಭಾಗವಹಿಸಿದ್ದ ಯುವಕನನ್ನು ಥಳಿಸಲಾಗಿದ್ದು, ಯುವಕ ಸಾವನ್ನಪ್ಪಿರುವ ಘಟನೆ ಆನಂದ್ ಜಿಲ್ಲೆಯಲ್ಲಿ ನಡೆದಿದೆ. 
ಪ್ರಕರಣದ ಸಂಬಂಧ ಪಟೇಲ್ ಸಮುದಾಯದ 8 ಯುವಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಭಾನುವಾರ (ಅ.1 ರಂದು) ಈ ಘಟನೆ ನಡೆದಿದ್ದು, ಜಯೇಶ್ ಸೋಲಂಕಿ ಹಾಗೂ ಪ್ರಕಾಶ್ ಸೋಲಂಕಿ ಎಂಬ ಯುವಕರು ಹಾಗೂ ಇನ್ನಿಬ್ಬರು ದಲಿತ ಯುವಕರು ಗರ್ಭಾ ನೃತ್ಯ ನಡೆಯುತ್ತಿದ್ದ ದೇವಾಲಯದ ಬಳಿ ಕುಳಿತಿದ್ದರು. ದಾಳಿ ನಡೆಸಿದ್ದವರ ಪೈಕಿ ಇದ್ದ ಓರ್ವ ಯುವಕ ದಲಿತರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾನೆ ಎಂದು ಪೊಲೀಸರಿಗೆ ನೀಡಲಾಗಿರುವ ದೂರಿನಲ್ಲಿ ದೂರುದಾರರು ತಿಳಿಸಿದ್ದಾರೆ. 
ತಮಗೆ ಬಂದಿರುವ ದೂರಿನ ಮಾಹಿತಿಯನ್ನು ನೀಡಿರುವ ಪೊಲೀಸರು, "ದಲಿತರಿಗೆ ಗರ್ಭಾ ನೃತ್ಯ ನೋಡಲು ಅಧಿಕಾರವಿಲ್ಲ ಎಂದು ಅವಹೇಳನಕಾರಿಯಾಗಿ ಮಾತನಾಡಿ, ಇತರ ಯುವಕರನ್ನು ಕರೆದಿದು ದಲಿತ ಯುವಕರನ್ನು ಥಳಿಸಿದ್ದಾರೆ. ಥಳಿತಕ್ಕೊಳಗಾದ ಯುವಕನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕಿ ಉಳಿಯಲಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video