ಸಂಬಾಲ್(ಉತ್ತರಪ್ರದೇಶ): ಕಳೆದ ಎರಡು ವರ್ಷಗಳಿಂದ ತಂದೆಯಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಅಪ್ರಾಪ್ತ ಬಾಲಕಿ ತನ್ನ ರಕ್ಷಣೆಗಾಗಿ ಸೋಮವಾರ ರಾತ್ರಿ ತಂದೆಯನ್ನೇ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಪ್ರದೇಶದ ಸಂಬಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸೋಮವಾರ ರಾತ್ರಿ 16 ವರ್ಷದ ಮಗಳ ಮೇಲೆ ತಂದೆ ಅತ್ಯಾಚಾರ ಮಾಡಿದ್ದಾನೆ. ಇದಾದ ಬಳಿಕ ಮಗಳು ರಕ್ಷಣೆಗಾಗಿ ತಂದೆಯನ್ನು ಹತ್ಯೆ ಮಾಡಿದ್ದು ಮಂಗಳವಾರ ಬೆಳಗ್ಗೆ ತಂಗಿ ಹಾಗೂ ನೆರೆಯವರ ಜತೆ ಠಾಣೆಗೆ ಬಂದ ಸಂತ್ರಸ್ತ ಬಾಲಕಿ ತಂದೆಯನ್ನು ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾಳೆ ಎಂದು ಸಬ್ ಇನ್ಸ್ ಪೆಕ್ಟರ್ ಶಮ್ಶಾದ್ ಅಲಿ ಹೇಳಿದ್ದಾರೆ.
ಇನ್ನು ಬಾಲಕಿ ಹೇಳಿಕೆಯಂತೆ ಮೃತ ತಂದೆಯ ವಿರುದ್ಧ ದೂರು ದಾಖಲಿಸಲಾಗಿದೆ. ಅತ್ಯಾಚಾರ ಸಂತ್ರಸ್ತ ಬಾಲಕಿ ಅನಕ್ಷರಸ್ಥಳಾಗಿದ್ದು ಆತ್ಮರಕ್ಷಣೆಗಾಗಿ ತಂದೆಯನ್ನು ಕೊಲೆ ಮಾಡಿರುವುದರಿಂದ ಆಕೆಯ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಲಿ ಹೇಳಿದ್ದಾರೆ.
ಬಾಲಕಿ ತನ್ನ ದೂರಿನಲ್ಲಿ ತನ್ನ ತಾಯಿ 9 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಮನೆಯಲ್ಲಿ ಅಜ್ಜಿ, ತಂದೆ, ನಾನು ಹಾಗೂ ನನ್ನ ತಂಗಿ ಮೂವರು ವಾಸವಾಗಿದ್ದು ಕಳೆದ ಎರಡು ವರ್ಷಗಳಿಂದ ತಂದೆ ನನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದರು. ಇನ್ನು ಅಜ್ಜಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಹೀಗಾಗಿ ಅವರಿಂದ ಯಾವುದೇ ರೀತಿಯ ಸಹಾಯ ಸಿಗುತ್ತಿರಲಿಲ್ಲ. ಅತ್ಯಾಚಾರದ ವಿಷಯ ಯಾರಿಗಾದರೂ ಹೇಳಿದರೇ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಕಳೆದ ಸೋಮವಾರ ರಾತ್ರಿ ಸಹ ನನ್ನ ಮೇಲೆ ಅತ್ಯಾಚಾರ ನಡೆಸಿದ್ದು ಇದರಿಂದ ತಾನು ಆತ್ಮರಕ್ಷಣೆಗಾಗಿ ತಂದೆಯನ್ನು ಕೊಂದಿರುವುದಾಗಿ ಹೇಳಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics