ಬಾಲಿವುಡ್ ನಟ ಶಾರೂಕ್ ಖಾನ್, ಬಲ ಚಿತ್ರದಲ್ಲಿ ಗುರುಗಾಂವ್ ನ ರೆಡ್ ಚಿಲ್ಲೀಸ್ ಕಚೇರಿ
ಮುಂಬೈ: ಬಾಲಿವುಡ್ ನಟ ಶಾರೂಕ್ ಖಾನ್ ಗೆ ಸೇರಿದ ಗುರುಗಾಂವ್ ನಲ್ಲಿರುವ ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್ ನಲ್ಲಿ ಸುಮಾರು 2,000 ಚದರಡಿ ವಿಸ್ತೀರ್ಣದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕೆಫೆಟೇರಿಯಾವನ್ನು ಬೃಹತ್ ಮುಂಬೈ ಮಹಾ ನಗರ ಪಾಲಿಕೆ(ಬಿಎಂಸಿ) ನಿನ್ನೆ ಸಂಜೆ ಕೆಡವಿ ಹಾಕಿದೆ.
ಗುರುಗಾಂವ್ ನಲ್ಲಿರುವ ರೆಡ್ ಚಿಲ್ಲೀಸ್ ವಿಎಫ್ಎಕ್ಸ್ ಕಚೇರಿಯ ನಾಲ್ಕನೇ ಮಹಡಿಯಲ್ಲಿ ಅಕ್ರಮವಾಗಿ ಕೆಫೆಟೇರಿಯಾ ನಿರ್ಮಿಸಲಾಗಿತ್ತು ಎಂದು ವರದಿಯಾಗಿದೆ.
ಈ ಬಗ್ಗೆ ಸುದ್ದಿ ಖಚಿತಪಡಿಸಿರುವ ರೆಡ್ ಚಿಲ್ಲೀಸ್ ಕಚೇರಿ, ನಾವು ಈ ಕಟ್ಟಡದ ಬಾಡಿಗೆದಾರರಾಗಿದ್ದು, ಆಸ್ತಿಯ ಮಾಲಿಕರಲ್ಲ ಎಂದು ದೃಢಪಡಿಸಿದ್ದಾರೆ.
ರೆಡ್ ಚಿಲ್ಲೀಸ್ ವಿಎಫ್ಎಕ್ಸ್ ಕಚೇರಿ ಬಾಡಿಗೆಯದಾಗಿದ್ದು ಕಟ್ಟಡದ ಮಾಲಿಕರಲ್ಲ. ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಹೊರಗೆ ವಿಶಾಲವಾದ ಪ್ರಾಂಗಣವಿದ್ದು ಅದನ್ನು ನೌಕರರು ಆಹಾರ ತಿನ್ನಲು ಬಳಸುತ್ತಿದ್ದರು. ಅಲ್ಲಿ ಕ್ಯಾಂಟೀನ್ ನಡೆಯುತ್ತಿರಲಿಲ್ಲ. ಮುಂಬೈ ಮಹಾನಗರ ಪಾಲಿಕೆ ಕೆಡವಿ ಹಾಕಿದ ಕಡ್ಡಡದ ಭಾಗದಲ್ಲಿ ಸೌರ ವಿದ್ಯುತ್ ನ್ನು ಅಳವಡಿಸಲಾಗಿತ್ತು.ಅದರಿಂದ ಇಡೀ ಕಟ್ಟಡಕ್ಕೆ ವಿದ್ಯುತ್ ಸರಬರಾಜಾಗುತ್ತಿತ್ತು. ಕೆಡವಿ ಹಾಕಿರುವ ಬಗ್ಗೆ ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಚರ್ಚಿಸಲಾಗುವುದು ಎಂದು ರೆಡ್ ಚಿಲ್ಲೀಸ್ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
2015ರ ಆರಂಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಶಾರೂಕ್ ಖಾನ್ ನಿವಾಸ ಮನ್ನತ್ ಬಂಗಲೆಯ ಹೊರಗೆ ಸ್ಟೀಲ್ ರ್ಯಾಂಪ್ ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂದು ಕೆಡವಿ ಹಾಕಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos