ಸಾಂದರ್ಭಿಕ ಚಿತ್ರ 
ದೇಶ

ಸೆಲ್ಫಿಯಿಂದ ಸಾವು: ಭಾರತ ನಂಬರ್ ಒನ್

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವಿಗೀದಾದವರ ಪಟ್ಟಿಯಲ್ಲಿ ಭಾರತೀಯರೇ ಅಗ್ರ ಪಂಕ್ತಿಯಲ್ಲಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ.

ನವದೆಹಲಿ: ಇಂದಿನ ಆಧುನಿಕ ಯುಗದಲ್ಲಿ ಎಲ್ಲರ ಕೈನಲ್ಲಿ ಮೊಬೈಲ್ ಗಳಿವೆ. ಬಹುತೇಕರೆಲ್ಲರೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡುವವರೇ ಆಗಿದ್ದಾರೆ. ಆದರೆ ಇದೇ ಸೆಲ್ಫಿ ಹಲವಾರು ಜೀವಗಳ ಪ್ರಾಣ ಹಾನಿಗೆ ಕಾರಣವಾಗಿದೆ. ಹೀಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವಿಗೀದಾದವರ ಪಟ್ಟಿಯಲ್ಲಿ ಭಾರತೀಯರೇ ಅಗ್ರ ಪಂಕ್ತಿಯಲ್ಲಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ.
2014-2016ರ ನಡುವೆ ರಲ್ಲಿ ಈ ಸಮೀಕ್ಷೆ ನಡೆದಿದೆ.  ಆ ನಂತರದ ದಿನಗಳಲ್ಲಿ ಅಲ್ಲಲ್ಲಿ ಸೆಲ್ಫಿ ಅನಾಹುತಗಳು ವರದಿಯಾಗುತ್ತಲೇ ಇವೆ.
ಜಾಗತಿಕವಾಗಿ ಒಟ್ಟು ಸೆಲ್ಫಿ ಸಾವುಗಳಲ್ಲಿ ಭಾರತದ ಪಾಲು ಶೇ76ರಷ್ಟಿದೆ.ಸೆಲ್ಫಿ ಅನಾಹುತಕ್ಕೆ ಬಲಿಯಾದವರಲ್ಲಿ ಶೇ 75ರಷ್ಟು ಪುರುಷರಾಗಿದ್ದಾರೆ. ಅದರಲ್ಲಿಯೂ ಶೇ. 68ದಷ್ಟು ಜನ 24ವರ್ಷಕ್ಕಿಂತ ಕೆಳಾಗಿನವರಾಗಿದ್ದಾರೆ.
2015 ಮಾರ್ಚ್ ರಲ್ಲಿ ನಾಗ್ಪುರ ಸಮೀಪದ ಮುಂಗ್ರುರು ಕೆರೆಯಲ್ಲಿ ದೋಣಿಯೊಳಗಿನಿಂದ ಸೆಲ್ಫಿ ತೆಗೆದುಕೊಳ್ಳ ಹೋಗಿ ಏಳು ಮಂದಿ ಸಾವಿಗೀಡಾಗಿದ್ದರು. 2016ರಲ್ಲಿ ಕಾನ್ಪುರದಲ್ಲಿ ಗಂಗಾ ನದಿಯಲ್ಲಿ ಸೆಲ್ಫಿ ತೆಗೆದುಕೊಳ್ಳ ಹೋಗಿದ್ದ ಏಳು ಜನ ಅಸುನೀಗಿದ್ದರು.
ಇತ್ತೀಚೆಗೆ ಕನಕಪುರ ಹಾಗೂ ಬಿಡದಿಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ನಾಲ್ವರು ವಿದ್ಯಾರ್ಥಿಗಳು ಸಾವಿಗೆ ತುತ್ತಾಗಿದ್ದರು ಎನ್ನುವುದನ್ನು ನಾವಿಲ್ಲಿ ನೆನೆಯಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2026 ರಲ್ಲಿ "ರಾಜಕೀಯ ಬಡ್ತಿ": ಗೃಹ ಸಚಿವ ಪರಮೇಶ್ವರ ಹೇಳಿಕೆ ಹಿಂದಿನ ಮರ್ಮ ಏನು?

Switzerlandನ ಕ್ರಾನ್ಸ್–ಮಾಂಟಾನಾ ಸ್ಕೀ ರೆಸಾರ್ಟ್‌ನಲ್ಲಿ ಭಾರೀ ಸ್ಫೋಟ: ಹಲವರು ಸಾವು

ಪುಟಿನ್ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ: ವಿಡಿಯೋ ಬಿಡುಗಡೆ ಮಾಡಿದ ರಷ್ಯಾ, ಝೆಲೆನ್ಸ್ಕಿ ಇನ್ನು ಬಂಕರ್‌ನಲ್ಲೇ ಎಂದು ಶಪಥ..!

ಪುಟಿನ್ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ: ರಷ್ಯಾ ಆರೋಪ ತಳ್ಳಿಹಾಕಿದ ಯುಎಸ್ ಇಂಟೆಲಿಜೆನ್ಸಿ! ಹೇಳಿದ್ದು ಏನು?

ಭಾರತ-ಪಾಕಿಸ್ತಾನ ಸೇನಾ ಸಂಘರ್ಷ: ಚೀನಾದ ಮಧ್ಯಸ್ಥಿಕೆ ಹೇಳಿಕೆ ದೇಶಕ್ಕೆ ಮಾಡಿದ ಅಪಮಾನ, ಓವೈಸಿ ಕಿಡಿ!

SCROLL FOR NEXT