ನವದೆಹಲಿ: ದೇಶದ ಆರ್ಥಿಕತೆ ಬಗ್ಗೆ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಯಶ್ವಂತ್ ಸಿನ್ಹಾ ಈಗ ಬಿಜೆಪಿಗೂ ಸವಾಲು ಹಾಕಿದ್ದಾರೆ.
ನನ್ನ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳುವುದಾದರೆ ಕೈಗೊಳ್ಳಲಿ ನಾನು ಅದಕ್ಕೆ ಹೆದರುವುದಿಲ್ಲ, ಶಿಸ್ತು ಕ್ರಮ ಕೈಗೊಂಡರೆ ಅದು ನನ್ನ ಜೀವನದ ಅತ್ಯುತ್ತಮ ದಿನವಾಗಿರಲಿದೆ ಎಂದು ಹೇಳಿದ್ದಾರೆ. ಬಿಜೆಪಿಯೊಂದಿಗೆ ಪಕ್ಷದ ಇತರರಿಗೆ ಎಷ್ಟು ನಂಟಿದೆಯೋ ಅಷ್ಟೇ ತಮಗೂ ಇದ್ದು ತಾವೂ ಸಹ ಪಕ್ಷಕ್ಕಾಗಿ ಬೆವರು, ರಕ್ತ ಹರಿಸಿರುವುದಾಗಿ ಸಿನ್ಹಾ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಅವರ ಪುಸ್ತಕ ಟೈಡಿಂಗ್ಸ್ ಆಫ್ ಟ್ರಬಲ್ಡ್ ಟೈಮ್ಸ್ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಜೆಪಿ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಪ್ರಸ್ತಾಪಿಸಿದಾಗ ಪ್ರತಿಕ್ರಿಯೆ ನೀಡಿರುವ ಯಶ್ವಂತ್ ಸಿನ್ಹಾ, ಶಿಸ್ತು ಕ್ರಮ ಕೈಗೊಂಡರೆ ಅದು ನನ್ನ ಜೀವನದ ಅತ್ಯುತ್ತಮ ದಿನವಾಗಿರಲಿದೆ, ಬಿಜೆಪಿ ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ.