ಅಂಡಮಾನ್ ನಿಕೋಬಾರ್: ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ತನ್ನ ಚಟುವಟಿಕೆಗಳನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧಾವ್ ಎಲ್ಲಾ ರಾಷ್ಟ್ರಗಳೂ ಸಮುದ್ರ ಕಾನೂನಿಗೆ ಬದ್ಧವಾಗಿರಬೇಕು ಎಂದು ಕರೆ ನೀಡಿದ್ದಾರೆ.
ರಾಷ್ಟ್ರದ ಸಂವಿಧಾನವನ್ನು ಜನರು ತಿಳಿದುಕೊಂಡು ಜಾರಿಗೆ ತರುವಂತೆಯೇ ಸಮುದ್ರಕ್ಕೆ ಸಂಬಂಧಿಸಿದ ಕಾನೂನನ್ನು ರಾಷ್ಟ್ರಗಳೂ ಪಾಲಿಸಬೇಕಿದೆ ಎಂದು ಸಮುದ್ರಕ್ಕೆ ಸಂಬಂಧಿಸಿದ ಸಮಾವೇಶ (ಯುಎನ್ ಸಿಎಲ್ಒಎಸ್)ದಲ್ಲಿ ರಾಮ್ ಮಾಧವ್ ಅಭಿಪ್ರಾಯಪಟ್ಟಿದ್ದಾರೆ.
ಯುಎನ್ ಸಿಎಲ್ಒಎಸ್ ನ್ನು ಇಂಡಿಯಾ ಫೌಂಡೇಶನ್ ಆಯೋಜಿಸಿದ್ದು ಸಮುದ್ರ ಸಂಪನ್ಮೂಲಗಳ ಬಳಕೆ, ಸಮುದ್ರ ಪ್ರದೇಶದಲ್ಲಿ ನಡೆಯುವ ಚಟುವಟಿಕೆಗಳಿಗೆ ಕಾನೂನಿನ ಚೌಕಟ್ಟನ್ನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆದಿದೆ. ಅ.5 ರಿಂದ ಅಂಡಮಾನ್ ನಿಕೋಬಾರ್ ನಲ್ಲಿ ಪ್ರಾರಂಭವಾಗಿರುವ ಯುಎನ್ ಸಿಎಲ್ಒಎಸ್ ನಲ್ಲಿ ಫಿಲಿಪೇನ್ಸ್, ಲಾವೋಸ್, ಥಾಯ್ ಲ್ಯಾಂಡ್, ಸಿಂಗಪೂರ್, ಮಯನ್ಮಾರ್, ಇಂಡೋನೇಷ್ಯಾ, ವಿಯೆಟ್ನಾಂ, ಜಪಾನ್ ಹಾಗೂ ಜರ್ಮನಿಯ ದೇಶಗಳ ರಾಯಭಾರಿಗಳು ಭಾಗಿಯಾಗಿದ್ದಾರೆ.