ದೇಶ

ಕರ್ನೂಲು: ಸಿನಿಮೀಯ ರೀತಿಯಲ್ಲಿ ಎಪಿಎಸ್ಆರ್ ಟಿಸಿ ಬಸ್ ಕಳ್ಳತನ

ಸಿನಿಮೀಯ ರೀತಿಯಲ್ಲಿ ಎಪಿಎಸ್ಆರ್ ಟಿಸಿ ಬಸ್ ಕಳ್ಳತನ ನಡೆದಿರುವ ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ನಂದಿಕೊಟ್ಕೂರು ಡಿಪೋದಲ್ಲಿ ನಡೆದಿದೆ.

ಕರ್ನೂಲು: ಸಿನಿಮೀಯ ರೀತಿಯಲ್ಲಿ ಎಪಿಎಸ್ಆರ್ ಟಿಸಿ ಬಸ್ ಕಳ್ಳತನ ನಡೆದಿರುವ ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ನಂದಿಕೊಟ್ಕೂರು ಡಿಪೋದಲ್ಲಿ ನಡೆದಿದೆ. 
ಬಸ್ ಚಾಲಕ ರಾತ್ರಿ ಸುಮಾರು 11:30 ರ ವೇಳೆಗೆ ಬನ್ನು ಡಿಪೋದಲ್ಲಿ ತಂದು ನಿಲ್ಲಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಬಸ್ ನಿಲ್ಲಿಸಿದ್ದ ಜಾಗದಿಂದ ಕಣ್ಮರೆಯಾಗಿದೆ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ನಂದಿಕೊಟ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಕೊನೆಗೂ ಜುಪಾಡು ಬಂಗ್ಲೋ ಮಾರ್ಗದಲ್ಲಿ ಬಸ್ ಪತ್ತೆಯಾಗಿದೆ. ಮುಖ್ಯ ಪೊಲೀಸ್ ಪೇದೆ ಕೆ.ವೆಂಕಟರಮಣ ಹಾಗೂ ಇನ್ನಿತರ ಪೇದೆಗಳು ಬಸ್ ನ್ನು ಬೆನ್ನಟ್ಟಿದ್ದಾರೆ. ಸಿಕ್ಕಿಬಿದ್ದ ಬಸ್ ಕಳ್ಳ ಶ್ರೀನಿವಾಸ್ (30) ಪೊಲೀಸ್ ಪೇದೆಗಳ ಬೈಕ್ ಮೇಲೆ ಬಸ್ ನ್ನು ಚಲಾಯಿಸಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೇ ಬಸ್ ನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಕಳ್ಳನ ಯತ್ನ ವಿಫಲವಾಗಿದ್ದು ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. 
ಬಸ್ ಕಳ್ಳನನ್ನು ಪೊಲೀಸರು ಬಂಧಿಸಿದ್ದು, ಪೊಲೀಸ್ ಪೇದೆಗಳಿಗೆ ಗಾಯಗಳುಂಟಾಗಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾಖಲೆಯ 6ನೇ ಬಾರಿಗೆ U19 World Cup ಗೆದ್ದ ಭಾರತೀಯ ಯುವ ಪಡೆ

3500 ಕಿ.ಮೀಟರ್‌ವರೆಗೆ ನಿಖರ ದಾಳಿ ಸಾಮರ್ಥ್ಯ: Agni-3 ಪರಮಾಣು ಕ್ಷಿಪಣಿ ಯಶಸ್ವಿ ಪರೀಕ್ಷೆ!

"ಇನ್ನೂ 25 ಬಾಕಿ ಇದೆ": ಶುಭಾಶಯ ಕೋರಿದ ನಾಯಕನಿಗೆ ಮೋದಿ ಹೀಗೆ ಹೇಳಿದ್ದೇಕೆ?

ರಿಲೀಸ್‌ಗೂ ಮುನ್ನವೇ ಧುರಂಧರ್ 2 ಎದುರು Toxic ಆರ್ಭಟ ಶುರು: ತೆಲುಗು ರಾಜ್ಯಗಳ ವಿತರಣಾ ಹಕ್ಕು ದಾಖಲೆಯ 120 ಕೋಟಿಗೆ ಮಾರಾಟ!

ಬಿಜೆಪಿಯ 'ನುಂಗಪ್ಪ' ಜಾಹೀರಾತಿನ ವಿರುದ್ಧ ಕಾಂಗ್ರೆಸ್ ದೂರು

SCROLL FOR NEXT