ಅರುಣ್ ಶೌರಿ 
ದೇಶ

ಪ್ರಧಾನಿ ಹುದ್ದೆಗೆ ಮೋದಿಯನ್ನು ಬೆಂಬಲಿಸಿ ತಪ್ಪು ಮಾಡಿದೆ: ಅರುಣ್ ಶೌರಿ

ಬಿಜೆಪಿ ಬೆಂಬಲಿತ ಜನತಾದಳ ಸರ್ಕಾರದ ನೇತೃತ್ವ ವಹಿಸಿದ್ದ ವಿಪಿ ಸಿಂಗ್ ಅವರನ್ನು ಬೆಂಬಲಿಸಿದ ನಂತರ ಪ್ರಧಾನಿ ಹುದ್ದೆಗೆ ಮೋದಿ ಅವರನ್ನು ಬೆಂಬಲಿಸಿದ್ದು ನಾನು ಮಾಡಿದ 2 ನೇ ತಪ್ಪು ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಅರುಣ್ ಶೌರಿ ಹೇಳಿದ್ದಾರೆ.

ಕಸೌಲಿ: ಬಿಜೆಪಿ ಬೆಂಬಲಿತ ಜನತಾದಳ ಸರ್ಕಾರದ ನೇತೃತ್ವ ವಹಿಸಿದ್ದ ವಿಪಿ ಸಿಂಗ್ ಅವರನ್ನು ಬೆಂಬಲಿಸಿದ ನಂತರ  ಪ್ರಧಾನಿ ಹುದ್ದೆಗೆ ಮೋದಿ ಅವರನ್ನು ಬೆಂಬಲಿಸಿದ್ದು ನಾನು ಮಾಡಿದ 2 ನೇ ತಪ್ಪು ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಅರುಣ್ ಶೌರಿ ಹೇಳಿದ್ದಾರೆ. 
ನಾನು ಎರಡು ತಪ್ಪುಗಳನ್ನು ಮಾಡಿದ್ದೇನೆ. ಒಂದು ವಿಪಿ ಸಿಂಗ್ ಅವರನ್ನು ಬೆಂಬಲಿಸಿದ್ದು, ಮತ್ತೊಂದು ಮೋದಿ ಅವರನ್ನು ಪ್ರಧಾನಿ ಹುದ್ದೆಗೆ ಬೆಂಬಲಿಸಿದ್ದು, ಎಂದು ಖುಷ್ವಂತ್ ಸಿಂಗ್ ಸಾಹಿತ್ಯ ಹಬ್ಬದಲ್ಲಿ ಮಾತನಾಡಿರುವ ಅರುಣ್ ಶೌರಿ ಹೇಳಿದ್ದಾರೆ. 
ಈಗ ಅವರೇನು ಹೇಳುತ್ತಿದ್ದಾರೆ ಎಂಬುದನ್ನು ನಂಬಬೇಡಿ, ಹಿಂದೆ ಅವರೇನು ಹೇಳಿದ್ದರು ಎಂಬುದನ್ನು ನೋಡಿ, ಅವರು ಹೇಳಿದ್ದರ ಪ್ರಕಾರ ನಡೆಯುತ್ತಿಲ್ಲ, ಆದರೆ ಅವರು ಮಾಡುತ್ತಿರುವುದನ್ನು, ಬೇರೆಯವರಲ್ಲಿ ಖಂಡಿಸುತ್ತಿದ್ದುದ್ದನ್ನೇ ಅವರೂ ಮಾಡುತ್ತಿದ್ದಾರೆ. ಇದೇ ಭವಿಷ್ಯಕ್ಕೆ ಮುಖ್ಯವಾಗುತ್ತದೆ ಎಂದು ಶೌರಿ ಅಭಿಪ್ರಾಯಪಟ್ಟಿದ್ದಾರೆ. 
ನಾಯಕರು ಏನನ್ನು ಹೇಳುತ್ತಾರೋ ಅದನ್ನು ವಿಮರ್ಶಾತ್ಮಕವಾಗಿ ಪರೀಕ್ಷೆಗೊಳಪಡಿಸುವುದರಿಂದ ನಾಯಕತ್ವವನ್ನು ನಿರ್ಧರಿಸಬೇಕು, ಆದರೆ ಇದನ್ನು ಮಾಡದೇ ಇರುವುದು ನಮ್ಮ, ನಮ್ಮ ಪತ್ರಿಕೆಗಳ ಅತ್ಯಂತ ದೊಡ್ಡ ವೈಫಲ್ಯ, ನನ್ನ ರೀತಿಯವರೂ ಸಹ ಗುಜರಾತ್ ಮಾಡೆಲ್ ನ್ನು ವಿಮರ್ಶಾತ್ಮಕವಾಗಿ ಪರೀಕ್ಷೆಗೊಳಪಡಿಸಲಿಲ್ಲ ಎಂದು ಶೌರಿ ಬೇಸರ ವ್ಯಕ್ತಪಡಿಸಿದ್ದಾರೆ.
ಗುಜರಾತ್ ಮಾಡೆಲ್ ಮೊದಲ ಸ್ಥಾನದಲ್ಲಿ ಇರಲೇ ಇಲ್ಲ ಎಂಬುದು ಈಗ ಅರ್ಥವಾಗುತ್ತಿದೆ.  ಗುಜರಾತ್ ವೈಬ್ರೆಂಟ್ ಸಭೆಯನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ 10 ಲಕ್ಷ ಕೋಟಿ, 15 ಲಕ್ಷ ಕೋಟಿ ಹೂಡಿಕೆಯನ್ನು ಭರವಸೆ ನೀಡಲಾಯಿತು. ಭರವಸೆಗೂ ಕಾರ್ಯರೂಪಕ್ಕೆ ಬಂದಿದ್ದಕ್ಕೂ ವ್ಯತ್ಯಾಸವೇನು ಎಂಬುದನ್ನು ತಿಳಿದುಕೊಳ್ಳಲು ಸಂಸ್ಥೆಗಳಿಗೆ 3 ವರ್ಷ ಬೇಕಾಯಿತು. ಕೊನೆಗೆ ವಾಸ್ತವದಲ್ಲಿ ಹೂಡಿಕೆಯಾದದ್ದು ಕೇವಲ ಶೇ.6 ರಷ್ಟು ಮಾತ್ರ, ಆದರೂ ಅದನ್ನು ಗ್ರೇಟ್ ಸಕ್ಸಸ್ ಎನ್ನಲಾಗುತ್ತದೆ ಎಂದು ಶೌರಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!