ದೇಶ

ಪ್ರಶಸ್ತಿ ವಾಪಸ್ ಮಾಡುವುದಾದರೆ, ಗೌರವ ಸ್ವೀಕರಿಸಬೇಡಿ: ಪ್ರಕಾಶ್ ರೈಗೆ ಸದಾನಂದ ಗೌಡ

Manjula VN
ನವದೆಹಲಿ: ಪ್ರಶಸ್ತಿಯನ್ನು ವಾಪಸ್ ಮಾಡುವುದಾದರೆ, ಮೊದಲ ಸಾಲಿನಲ್ಲೇ ನಿಂತು ಪ್ರಶಸ್ತಿ ಸ್ವೀಕರಿಸುವುದು ಯಾಕೆ ಎಂದು ನಟ ಪ್ರಕಾಶ್ ರಾಜ್'ಗೆ ಕೇಂದ್ರ ಸಚಿವ ಸದಾನಂದ ಗೌಡ ಅವರು ಪ್ರಶ್ನಿಸಿದ್ದಾರೆ. 
ಪ್ರಗತಿಪರ ಚಿಂತಕಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಬಲಿಗರೇ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಆಚರಿಸುತ್ತಿದ್ದರೂ ಪ್ರಧಾನಿ ಮೌನ ವಹಿಸಿರುವುದು ನನಗೆ ಅಚ್ಚರಿ ಮೂಡಿಸುತ್ತಿದೆ. ಅವರು ನನಗಿಂತಲೂ ದೊಡ್ಡ ನಟ. ನನಗೆ ಬಂದಿರುವ ಪ್ರಶಸ್ತಿಗಳನ್ನೆಲ್ಲಾ ಅವರಿಗೆ ಕೊಡಬೇಕೆಂದು ಅನಿಸುತ್ತಿದೆ ಎಂದು ಈ ಹಿಂದೆ ಪ್ರಕಾಶ್ ರಾಜ್ ಅವರು ಹೇಳಿದ್ದರು. 
ಪ್ರಕಾಶ್ ರಾಜ್ ಅವರ ಈ ಹೇಳಿಕೆ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಬಳಿಕ ಸ್ಪಷ್ಟನೆ ನೀಡಿದ್ದ ಅವರು, ಗೌರಿ ಹತ್ಯೆಯನ್ನು ತಮ್ಮ ಫಾಲೋವರ್'ಗಳೇ ಸಂಭ್ರಮಿಸುತ್ತಿದ್ದರೂ ಪ್ರಧಾನಿ ಮೋದಿ ಸುಮ್ಮನಿರುವುದರ ಬಗ್ಗೆ ಕುರಿತು ನಾನು ಆ ಹೇಳಿಕೆ ನೀಡಿದ್ದೆ. ಒಬ್ಬ ನಾಗರೀಕನಾಗಿ ನನಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ. ನಾನು ಒಬ್ಬ ನಟ ಅಷ್ಟೇ, ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ ಎಂದು ತಿಳಿಸಿದ್ದರು. 
ವಿವಾದ ಕುರಿತು ಹೇಳಿಕೆ ನೀಡಿರುವ ಸದನಂದ ಗೌಡ ಅವರು, ಪ್ರಶಸ್ತಿಗಳನ್ನು ವಾಪಸ್ ನೀಡುವುದೇ ಆದರೆ, ಮೊದಲ ಸಾಲಿನಲ್ಲಿ ನಿಂತು ಆ ಗೌರವವನ್ನು ಸ್ವೀಕರಿಸುವುದಾದರೂ ಏಕೆ?...ಎಂದು ಪ್ರಶ್ನಿಸಿದ್ದಾರೆ, ಅಲ್ಲದೆ, 5 ರಾಷ್ಟ್ರೀಯ ಪ್ರಶಸ್ತಿಗಳನ್ನು ವಾಪಸ್ ನೀಡಲು ಪ್ರಕಾಶ್ ರಾಜ್ ಏನು ಮೂರ್ಖರಲ್ಲ ಎಂದಿದ್ದಾರೆ. 
SCROLL FOR NEXT