ದೇಶ

ಅದ್ನಾನ್ ಸಾಮಿ- ಒಮರ್ ಅಬ್ದುಲ್ಲಾ ಟ್ವೀಟ್ ವಾರ್: ಸೇರಿಗೆ ಸವ್ವಾಸೇರು!

Shilpa D
ಶ್ರೀನಗರ:  ಶ್ರೀನಗರದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಚೇರಿ ಸಂಬಂಧ ಜಮ್ಮು ಕಾಶ್ಮೀರ ಮಾಜಿ ಸಿಎಂ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಾಧ್ಯಕ್ಷ ಒಮರ್ ಅಬ್ದುಲ್ಲಾ ಮತ್ತು ಪಾಕಿಸ್ತಾನ ಮೂಲದ ಗಾಯಕ ಅದ್ನಾನ್ ಸಾಮಿ ನಡುವೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ವಾರ್ ನಡೆದಿದೆ.
ಶ್ರೀನಗರದ  ಎಸ್ ಕೆ ಐಸಿಸಿ ಯ ಪ್ರಸಿದ್ದ ದಾಲ್ ಸರೋವರದಲ್ಲಿ ಭಾರತದ ಪೌರತ್ವ ಪಡೆದಿರುವ ಅದ್ನಾನ್ ಸಾಮಿ ಅವರ ಸಂಗೀತ ಕಚೇರಿಯನ್ನು ಶನಿವಾರ ಏರ್ಪಡಿಸಲಾಗಿತ್ತು. ಜಮ್ಮು ಕಾಶ್ಮೀರ ಸರ್ಕಾರ ಮತ್ತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಮ್ಮು ಕಾಶ್ಮೀರ ಸುರಕ್ಷಿತ ಪ್ರವಾಸಿ ತಾಣ ಎಂಬ ಸಂದೇಶ ರವಾನಿಸಿಲು ಈ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅದ್ನಾನ್ ಸಾಮಿ ಸಂಗೀತ ಕಾರ್ಯಕ್ರಮದ ಖಾಲಿ ಚೇರ್ ಗಳಿರುವ ಫೋಟೋ ಟ್ವಿಟ್ಟರ್ ನಲ್ಲಿ ಹಾಕುವ ಮೂಲಕ ಟ್ಟೀಟ್ ವಾರ್ ಆರಂಭವಾಯಿತು. ಈ ಫೋಟೋಗೆ ಪ್ರತಿಕ್ರಿಯಿಸಿದ ಒಮರ್ ಅಬ್ದುಲ್ಲಾ, ಇದು ನಿಜವಾಗಿಯೂ ಶೋಚನೀಯ,  ಇಷ್ಟು ಹೊತ್ತಿಗೆ ಆ ಸೀಟುಗಳು ಭರ್ತಿಯಾಗಿರಬಹುದು ಎಂದು ಭಾವಿಸುತ್ತೇನೆ, ಸಂಜೆಯೊಂದನ್ನು ಜನರಿಗೆ ಶಾಂತಿಯುತ ಪರಿಸರವಾಗಿ ಸಂಗೀತ ಬದಲಾಯಿಸಬಲ್ಲದು ಎಂದು ಟ್ಟೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅದ್ನಾನ್ ಸಾಮ, ನೀವು ಮಾಜಿ ಮುಖ್ಯಮಂತ್ರಿ, ಕೇವಲ ಒಂದು ಸಂಗೀತ ಗೋಷ್ಠಿಗೆ ಈ ಮಟ್ಟದಲ್ಲಿ ಧೃತಿ ಗೆಡಬಾರದು. ನಿಮಗೆ ಖಾಲಿ ಕುರ್ಚಿ ಎಂದು ಹೇಳಿದ ಸುದ್ದಿಯ ಮೂಲ ಸರಿಯಿಲ್ಲ, ಇಲ್ಲಿದೆ ನೋಡಿ ಫೋಟೋಸ್ ಎಂದು ಜನರಿದ್ದ ಸಂಗೀತ ಗೋಷ್ಠಿಯ ಫೋಟೋಗಳನ್ನು ಅಪ್ ಮಾಡಿದ್ದರು.
ಇದಕ್ಕೆ ಉತ್ತರಿಸಿದ ಅಬ್ದುಲ್ಲಾ, ನಿಮ್ಮ ಸಂಗೀತ ಕಚೇರಿಗೆ ಜನ ತುಂಬುತ್ತಾರೆ ಎಂದು ನಂಬಿಕೆ ಮಾಡುವುದು ಹೇಗೆ ನನ್ನನ್ನು ಧೃತಿಗೆಡಿಸುತ್ತದೆ. ಸಂಗೀತ ಸಂಜೆಯಿಂದ ಜನ ಖುಷಿಗೊಂಡರೇ ನನಗೆ ಸಂತಸವಾಗುತ್ತದೆ, ನಾನು ಒಂದು ಕಾಲದಲ್ಲಿ ನಿಮ್ಮ ಸಂಗೀತ ಅಭಿಮಾನಿಯಾಗಿದ್ದೆ ಎಂದು ಎಂದು ಟ್ವೀಟ್ ಮಾಡಿದ್ದಾರೆ.
ಇಬ್ಬರ ನಡುವಿನ ಟ್ವೀಟ್ ವಾರ್ ಮುಂದುವರಿದು, ನಿಮಗೆ ಗಾಸಿಪ್ ಕಾಲಂ ನಲ್ಲಿ ಹೆಸರು ಕಂಡುಕೊಳ್ಳುವ ಆಸೆ ಎಂದು ಅದ್ನಾನ್ ಸಾಮಿಗೆ ಒಮರ್ ಹೇಳಿದ್ದಾರೆ. ಇದಕ್ಕೆ ಸಾಮಿ ಕೂಡ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
SCROLL FOR NEXT