ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಆಸ್ಪತ್ರೆಯಲ್ಲಿ ಅಸ್ವಸ್ಥಗೊಂಡ ತನ್ನ ಮಗುವನ್ನು ನೋಡಿಕೊಳ್ಳುತ್ತಿರುವ ಮಹಿಳೆ
ಲಕ್ನೋ: ಉತ್ತರ ಪ್ರದೇಶದ ಶ್ಯಾಮ್ಲಿ ಜಿಲ್ಲೆ ಯ ಸಕ್ಕರೆ ಕಾರ್ಖಾನೆ ಯಿಂದ ಹೊರಹೊಮ್ಮಿದ ವಿಷಪೂರಿತ ಗಾಳಿ ಸೇವನೆಯಿಂದ ಸುಮಾರು 300 ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಈಡಾಗಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಮಿಷನರ್ ಸಹರಾನ್ಪುರ್ ಅವರಿಗೆ ಈ ವಿಷಯ ಕುರಿತು ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
ಶಾಮ್ಲಿಯ ಖಾಸಗಿ ಶಾಲೆಗೆ (ಸರಸ್ವತಿ ಶಿಶು ಮಂದಿರ ಪಬ್ಲಿಕ್ ಸ್ಕೂಲ್) ಸೇರಿದ ವಿದ್ಯಾರ್ಥಿಗಳು ಸಕ್ಕರೆ ಕಾರ್ಖಾನೆಯಿಂದ ಗ್ಯಾಸ್ ಸೋರಿಕೆಯಾದ ನಂತರ ಹೊಟ್ಟೆ ನೋವು, ವಾಕರಿಕೆ ಆಗುತ್ತಿರುವುದಾಗಿ ದೂರು ನೀಡಿದರು.
"ಇದೇ ರೀತಿಯ ಘಟನೆಗಳು ಈ ಹಿಂದೆ ಸಹ ನಡೆದಿವೆ, ತನಿಖೆ ನಡೆಯುತ್ತಿದೆ ಮತ್ತು ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಮೀರತ್ ವಲಯ ವಲಯದ ಎಡಿಜಿ, ಪ್ರಶಾಂತ ಕುಮಾರ್ ತಿಳಿಸಿದ್ದಾರೆ.
ಎಲ್ಲಾ ಮಕ್ಕಳು ಸುರಕ್ಷಿತರಾಗಿದ್ದಾರೆ ಮತ್ತು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು
ಮುಖ್ಯ ಕಾರ್ಯದರ್ಶಿ, ಅವನಿಶ್ ಅವಸ್ಥಿ "ಕಮಿಷನರ್ ಸಹರಾನ್ಪುರ್ ಅವರು ಶ್ಯಾಮ್ಲಿ ಘಟನೆಗೆ ಸಂಬಂಧಿಸಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ ಅನಾರೋಗ್ಯ ಪೀಡಿತ ಮಕ್ಕಳಿಗೆ ಎಲ್ಲಾ ಸಹಾಯವನ್ನು ಒದಗಿಸಲು ಡಿಎಂ ಮತ್ತು ಎಲ್ಲಾ ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ" ಎಂದರು
ಸ್ಥಳೀಯರು ಸಕ್ಕರೆ ಕಾರ್ಖಾನೆ ನೌಕರರು ತ್ಯಾಜ್ಯ ಘಟಕಗಳಲ್ಲಿ ರಾಸಾಯನಿಕಗಳನ್ನು ಸುರಿಯುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ, ಇಂದು ರಾಸಾಯನಿಕಯುಕ್ತ ಗಾಳಿ ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗಿದ್ದು ಅವರಲ್ಲಿ ಕೆಲವರು ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದಾರೆ.